ಮೈಸೂರು

ಕೆಲಸ ಸಿಗದ ಹಿನ್ನೆಲೆ : ವ್ಯಕ್ತಿ ನೇಣಿಗೆ ಶರಣು

ದುಬೈಗೆ ಕೆಲಸಕ್ಕೆ ತೆರಳಲು ಸಾಧ್ಯವಾಗದೇ ನಿರುದ್ಯೋಗಿಯಾದ ಕಾರಣಕ್ಕೆ ಮನನೊಂದ ವ್ಯಕ್ತಿಯೋರ್ವರು  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೃತನನ್ನು ಕರುಣಾಪುರ ಬಡಾವಣೆಯ ನಿವಾಸಿ ನಾಸಿರ್( 60) ಎಂದು ಗುರುತಿಸಲಾಗಿದೆ. ಈತ ಆಗಾಗ ದುಬೈಗೆ ತೆರಳಿ ಕೆಲಸ ಮಾಡಿಕೊಂಡು ಭಾರತಕ್ಕೆ ಹಿಂದಿರುಗುತ್ತಿದ್ದ ಎನ್ನಲಾಗಿದೆ. ಆದರೆ ಈ ಬಾರಿ ದುಬೈನಲ್ಲಿ  ಕೆಲಸ ಮಾಡಲು ಯತ್ನಿಸಿ ವಿಫಲನಾಗಿದ್ದು, ಕೆಲಸ ದೊರಕದ ಹಿನ್ನೆಲೆಯಲ್ಲಿ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: