ಮೈಸೂರು

ಮೂವರು ಮನೆಗಳ್ಳರ ಬಂಧನ: 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ವಶ

ಮೈಸೂರು,ಅ.19-ಎರಡು ಪ್ರತ್ಯೇಕ ಪ್ರಕರಣವನ್ನು ಭೇದಿಸಿರುವ ವಿ.ವಿ.ಪುರಂ ಪೊಲೀಸರು ಮೂವರು ಮನೆಗಳ್ಳರನ್ನು ಬಂಧಿಸಿ ಅವರಿಂದ 12 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಗೋಕುಲಂ 3ನೇ ಹಂತದ ನಿವಾಸಿ ಪ್ರಭು ಅವರು ಠಾಣೆಗೆ ಹಾಜರಾಗಿ ಯಾರೋ ನಕಲಿ ಕೀ ಬಳಸಿ ನಮ್ಮ ಮನೆಯ ಬೀರುವಿನಿಂದ ನಮ್ಮ ತಾಯಿಗೆ ಸೇರಿದ 85 ಸಾವಿರ ರೂ., ನಾಲ್ಕು ಗ್ರಾಂನ ಒಂದು ಜೊತೆ ಚಿನ್ನದ ಒಲೆ, 25 ಗ್ರಾಂನ ಒಂದು ಚಿನ್ನದ ನೆಕ್ ಲೆಸ್, 40 ಗ್ರಾಂನ ಚಿನ್ನದ ಮಾಂಗಲ್ಯ ಸರವನ್ನು ಕಳವು ಮಾಡಿರುವ ಬಗ್ಗೆ ದೂರು ನೀಡಿದರು.

ದೂರಿನ ಮೇರೆಗೆ ಕ್ರಮಕೈಗೊಂಡ ಪೊಲೀಸರು ರಿಃಆನ್ @ ಹರೀಶ್ @ ರೀಗನ್ ನನ್ನು ಬಂಧಿಸಿ ನಕಲಿ ಕೀ ಬಳಸಿ ಕಳುವು ಮಾಡಿದ್ದ 69 ಗ್ರಾಂನ ಚಿನ್ನದ ಒಡವೆಗಳು 48 ಸಾವಿರ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಚಿನ್ನದ ಒಡವೆ ಮತ್ತು ನಗದು ಹಣದ ಮೌಲ್ಯ 3 ಲಕ್ಷ ರೂ. ಆಗಿರುತ್ತದೆ.

ಮತ್ತೊಂದು ಪ್ರಕರಣದಲ್ಲಿ ಬೃಂದಾವನ ಬಡಾವಣೆ 2ನೇ ಹಂತ 3ನೇ ಕ್ರಾಸ್ ನಲ್ಲಿ ಮನೆಯ ಬಾಗಿಲನ್ನು ಮೀಟಿ 8 ಲಕ್ಷ ರೂ. ಬೆಲೆಬಾಳುವ 360 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಕಳವು ಮಾಡಿದ್ದ ಜೆ.ಪವನ್, ಜೆ.ಪ್ರವೀಣ ಅವರನ್ನು ಬಂಧಿಸಲಾಗಿದೆ. ಇವರಿಂದ ಕಳವಾಗಿದ್ದ 360 ಗ್ರಾಂನ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಪತ್ತೆ ಕಾರ್ಯವನ್ನು ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರು ಬಿ.ಟಿ.ಕವಿತಾ ಅವರ ಮಾರ್ಗದರ್ಶನದಲ್ಲಿ ನರಸಿಂಹರಾಜು ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸಿ.ಗೋಪಾಲ್ ಉಸ್ತುವಾರಿಯಲ್ಲಿ ವಿ.ವಿ.ಪುರಂ ಪೊಲೀಸ್ ಠಾಣೆಯ ಪಿಐ ಎಚ್.ಎನ್.ವಿನಯ್, ಸಿಬ್ಬಂದಿಗಳಾದ ಸೋಮಶೇಖರ, ಪ್ರಸನ್ನ ಜೀವನ್, ಈರಣ್ಣ, ಕೆ.ಜೆ.ದಿವಾಕರ್, ಮದುಸೂಧನ್, ಸುರೇಶ್ ಪಾಲ್ಗೊಂಡಿದ್ದರು. (ಕೆ.ಎಸ್, ಎಂ.ಎನ್)

Leave a Reply

comments

Related Articles

error: