Uncategorized

500 ಕೋಟಿ ರೂ. ವಂಚಿಸಿದ ಸ್ವಯಂ ಘೋಷಿತ ದೇವಮಾನವ ಕಲ್ಕಿ ಭಗವಾನ್

ಬೆಂಗಳೂರು,ಅ.19-ಸ್ವಯಂ ಘೋಷಿತ ದೇವಮಾನವ ಕಲ್ಕಿ ಭಗವಾನ್‌ ತೆರಿಗೆ ವಂಚಿಸಿರುವುದು ಆದಾಯ ತೆರಿಗೆ ಇಲಾಖೆ ನಡೆಸಿದ ಶೋಧದ ವೇಳೆ ಬೆಳಕಿಗೆ ಬಂದಿದೆ.

ಕಲ್ಕಿ ಭಗವಾನ್‌ ಅಂದಾಜು 500 ಕೋಟಿ ರೂ. ತೆರಿಗೆ ವಂಚಿಸಿದ್ದಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧದ ವೇಳೆ ಆಶ್ರಮಗಳಿಂದ 88 ಕೆ.ಜಿ. ಚಿನ್ನ ಹಾಗೂ ಅಪಾರ ಪ್ರಮಾಣದ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಲ್ಕಿ ಭಗವಾನ್‌ ಮೂಲ ಹೆಸರು ವಿಜಯಕುಮಾರ್ ನಾಯ್ಡು. ಮೂರು ದಶಕಗಳ ಹಿಂದೆ ಈತ ಭಾರತೀಯ ಜೀವ ವಿಮಾ ನಿಗಮದಲ್ಲಿ ಕ್ಲರ್ಕ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ವಿಚಾರ ಬಹಿರಂಗಗೊಂಡಿದೆ. (ಕೆ.ಎಸ್, ಎಂ.ಎನ್)

Leave a Reply

comments

Related Articles

error: