ಮೈಸೂರು

ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಅಧಿಕಾರಿಗಳಿಗೆ ಸನ್ಮಾನ

ಮೈಸೂರು,ಅ.19-ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಐವರು ಹಿರಿಯ ಅಧಿಕಾರಿಗಳನ್ನು ಹಂಚ್ಯಾಗ್ರಾಮದ ರೈತರು ಸನ್ಮಾನಿಸಿದರು.

ಗ್ರಾಮದ ಶ್ರೀ ಲಕ್ಷ್ಮಿದೇವಿ ಹಾಗೂ ಚಾಮುಂಡೇಶ್ವರಿ ರೈತ ಶಕ್ತಿ ಗುಂಪು, ಮಹಿಳಾ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲ್ಲೂಕು ಕಸಬಾ ಹೋಬಳಿ ತೋಟಗಾರಿಕೆ ಅಧಿಕಾರಿಯಾಗಿ ನಿವೃತ್ತರಾದ ಮಂಚಯ್ಯ, ಹಂಚ್ಯಾ ವೈದ್ಯಾಧಿಕಾರಿ ಹುದ್ದೆಯಿಂದ ವರ್ಗಾವಣೆಗೊಂಡ ಸುರೇಶ್, ನೂತನವಾಗಿ ಆಸ್ಪತ್ರೆಗೆ ಆಗಮಿಸಿದ ಸಿ.ರವೀಂದ್ರ, ಸಾತಗಳ್ಳಿ ಕಾವೇರಿ ಗ್ರಾಮೀಣ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿರುವ ಎಸ್.ಪದ್ಮಿನಿ, ಪಶು ವೈದ್ಯಾಧಿಕಾರಿ ಲಿಂಗರಾಜು ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವೈದ್ಯಾಧಿಕಾರಿ ಸುರೇಶ್ ಮಾತನಾಡಿ, ಗ್ರಾಮದ ಜನತೆ ನನ್ನ ಸೇವೆಗೆ ತೋರಿದ ಸನ್ಮಾನಕ್ಕೆ ನಾನು ಅಭಾರಿಯಾಗಿರುತ್ತೇನೆಂದು ಹೇಳಿದರು.

ಗ್ರಾಮೀಣ ವ್ಯವಸ್ಥಾಪಕಿ ಎಸ್. ಪದ್ಮಿನಿ ಮಾತನಾಡಿ, 13 ವರ್ಷದ ಸೇವೆಯಲ್ಲಿ ಇದೇ ಮೊದಲ ಬಾರಿಗೆ ವ್ಯವಸ್ಥಾಪಕರಾಗಿ ಬಂದಿದ್ದೇನೆ. ಮಹಿಳೆಯರು ಗಂಡ, ಮನೆ, ಸಂಸಾರ ಎಂದು ಸೀಮಿತವಾಗದೇ ಮಹಿಳಾ ಸಂಘಗಳ ಮೂಲಕ ಆರ್ಥಿಕ ಬಲವರ್ಧಿತರಾಗಬೇಕಿದೆ. ರೈತರು ಹಾಗೂ ಮಹಿಳೆಯರಿಗೆ ಬ್ಯಾಂಕ್ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಸದಾ ನಿಮ್ಮ ಸೇವೆಗೆ ಲಭ್ಯವಿರುತ್ತಿದೆ. ಅದರ ಸದುಪಯೋಗಪಡೆದುಕೊಳ್ಳುವಂತೆ ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮದ ರೈತರಾದ ಎಚ್.ಎಸ್.ರೆಹಮಾನ್, ತಾ.ಪಂ.ಸದಸ್ಯೆ  ಪುಟ್ಟತಾಯಮ್ಮ, ಗ್ರಾ.ಪಂ.ಸದಸ್ಯೆ ಪುಟ್ಟಮ್ಮ,  ಮುಖಂಡರಾದ ತಮ್ಮೇಗೌಡ, ಕಾಳೇಗೌಡ, ಜವರೇಗೌಡ, ಬೋರೇಗೌಡ, ದ್ಯಾವಪ್ಪ, ಮೇಷ್ಟ್ರು ಲಕ್ಷ್ಮಣ್ಣ,  ಸ್ವಾಮಿಗೌಡ, ಹೊನ್ನೇಗೌಡ, ವಿಷಕಂಠ, ಛಲವಾದಿ ಮಹಸಭಾ ತಾಲ್ಲೂಕು ಅಧ್ಯಕ್ಷ ಮಹದೇವು, ಲಕ್ಷ್ಮಣಚಾರಿ, ಚಿಕ್ಕಣ್ಣ, ಮಾಲಯ್ಯ ಇತರರು ಉಪಸ್ಥಿತರಿದ್ದರು. (ಕೆ.ಎಸ್, ಎಂ.ಎನ್)

Leave a Reply

comments

Related Articles

error: