ಕರ್ನಾಟಕ

ಮನೋವೈದ್ಯರ ಮೂರು ದಿನಗಳ ಸಮ್ಮೇಳನಕ್ಕೆ ತೆರೆ

ಮಡಿಕೇರಿ,ಅ.20 -ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ದಕ್ಷಿಣ ಭಾರತೀಯ ಮನೋವಿಜ್ಞಾನಿಗಳ 52ನೇ ಸಮ್ಮೇಳನಕ್ಕೆ ತೆರೆಬಿದ್ದಿದೆ.

ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿದ್ದಾಟಂಡ ಮೇರಿ ನಾಣಯ್ಯ, ನೂರಾರು ವೈದ್ಯರು ಪಾಲ್ಗೊಂಡ ಸಮ್ಮೇಳನ ಅತ್ಯಂತ ವ್ಯವಸ್ಥಿತವಾಗಿ ಜರುಗಿದೆ. ಕೆಲವೊಂದು ಸೌಕರ್ಯಗಳ ಕೊರತೆ ನಡುವೇ ಸಮ್ಮೇಳನವನ್ನು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವಿದ್ಯಾರ್ಥಿ, ಉಪನ್ಯಾಸಕರ, ಡೀನ್, ಪ್ರಾಂಶುಪಾಲರು ಸಿಬ್ಬಂದಿಗಳ ಸಹಕಾರದೊಂದಿಗೆ ಆಯೋಜಿಸಲಾಗಿದೆ. ಈ ಮೂಲಕ ಕೊಡಗು ಆತಿಥ್ಯಕ್ಕ ಹೆಸರುವಾಸಿ ಎಂಬುದು  ಮತ್ತೊಮ್ಮೆ ನಿರೂಪಿತವಾಗಿದೆ ಎಂದು ಶ್ಲಾಘಿಸಿದರು.

ಸಮ್ಮೇಳನ ಸಮಿತಿ ಅಧ್ಯಕ್ಷ ಡಾ.ಎ.ಜಗದೀಶ್ ಮಾತನಾಡಿ, ಪ್ರಕೃತಿ ವಿಕೋಪದಿಂದ ತತ್ತರಿಸಿದ್ದ ಕೊಡಗಿನಲ್ಲಿ ಸಮ್ಮೇಳನ ಆಯೋಜಿಸುವ ಮೂಲಕ ಕೊಡಗಿನ ಪ್ರವಾಸೋದ್ಯಮಕ್ಕೆ ಆರ್ಥಿಕ ಚೈತನ್ಯ ತುಂಬುವ ವೈದ್ಯರ ಉದ್ದೇಶ ಯಶಸ್ವಿಯಾಗಿದೆ. ದಕ್ಷಿಣ ಭಾರತದ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣವಲ್ಲದೇ ದೇಶದ ನಾನಾ ಕಡೆಗಳಿಂದ ಬಂದ ವೈದ್ಯರು ಕೊಡಗಿನ ಪ್ರಕೃತಿಯ ಸೌಂದರ್ಯ ಆಸ್ವಾದಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಭೇಟಿ ಮತ್ತಷ್ಟು ಹೆಚ್ಚಿನ ಪ್ರವಾಸಿಗರು ಕೊಡಗಿನತ್ತ ಬರಲು ಸಹಕಾರಿಯಾಗಬಲ್ಲದು ಎಂದರು.

ಕೊಡಗಿನಲ್ಲಿ ಈ ಸಮ್ಮೇಳನದ ಯಶಸ್ವಿಗೆ ಕಾರಣರಾದ ಮನೋವೈದ್ಯ ಡಾ.ರೂಪೇಶ್‍ ಗೋಪಾಲ್ ಹಾಗೂ ಪ್ರವಾಸೋದ್ಯಮಿ ಕುಂಡ್ರೋಳಂಡ ದಿನೇಶ್ ಕಾರ್ಯಪ್ಪ ನೆರವನ್ನೂ ಅವರು ಶ್ಲಾಘಿಸಿದರು.

ದಕ್ಷಿಣ ಭಾರತ ಮನೋವೈದ್ಯರ ಸಂಘದ ನೂತನ ಅಧ್ಯಕ್ಷ ಡಾ.ಪಿ.ಕಿಶನ್ ಮಾತನಾಡಿ, ಸಮ್ಮೇಳನದಲ್ಲಿ 900 ಕ್ಕೂ ಅಧಿಕ ವೈದ್ಯರು ಪಾಲ್ಗೊಂಡಿದ್ದರು. ಆ ಮೂಲಕ ಅತ್ಯಧಿಕ ವೈದ್ಯರು ಪಾಲ್ಗೊಂಡ ಸಮ್ಮೇಳನ ಎಂಬ ದಾಖಲೆಯನ್ನು ಈ ಸಮ್ಮೇಳನ ನಿರ್ಮಿಸಿದೆ. ಕೊಡಗಿನ ಸಂಸ್ಕೃತಿ, ಸಂಪ್ರದಾಯ, ಆತಿಥ್ಯ ಮನೋಭಾವನೆಯನ್ನು ದೇಶದ ವಿವಿಧೆಡೆಗಳ ವೈದ್ಯ ಪರಿವಾರಕ್ಕೆ ಪರಿಚಯಿಸುವಲ್ಲಿ ಸಮ್ಮೇಳನ ನೆರವಾಗಿದೆ ಎಂದರು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಿಜಿಸ್ಟ್ರಾರ್ ಡಾ.ರವಿಕಿರಣ್, ದಕ್ಷಿಣ ಭಾರತ ಮನೋವೈದ್ಯರ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಮಹೇಶ್‍ಗೌಡ, ಖಚಾಂಜಿ ಡಾ. ಗಂಗಾರಾಮ್, ಜಂಟಿಕಾರ್ಯದರ್ಶಿ ರಾಮಕೃಷ್ಣ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. (ಕೆಸಿಐ, ಎಂ.ಎನ್)

Leave a Reply

comments

Related Articles

error: