ಕರ್ನಾಟಕ

ಅ.28 ರಂದು ಶ್ರೀರಾಜರಾಜೇಶ್ವರಿ ದೇವಾಲಯದಲ್ಲಿ ‘ಅಮಾವಾಸ್ಯೆ ದೀಪೋತ್ಸವ’

ಮಡಿಕೇರಿ,ಅ.21-ದೀಪಾವಳಿಯ ಪ್ರಯುಕ್ತ ಕರ್ಣಂಗೇರಿ ಕ್ಷೇತ್ರದ ಶ್ರೀರಾಜರಾಜೇಶ್ವರಿ ದೇವಾಲಯದಲ್ಲಿ ಅ.28ರಂದು ರಾತ್ರಿ ‘ಅಮಾವಾಸ್ಯೆ ದೀಪೋತ್ಸವ’ ನಡೆಯಲಿದೆ ಎಂದು ದೇವಾಲಯದ ಧರ್ಮದರ್ಶಿಗಳಾದ ಗೋವಿಂದ ಸ್ವಾಮಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 28 ರಂದು ರಾತ್ರಿ 7 ಗಂಟೆಗೆ ಕಳಸ ಪೂಜೆ, ರಾತ್ರಿ 8 ಗಂಟೆಗೆ ಅನ್ನದಾನ, ಪ್ರಸಾದ ವಿನಿಯೋಗ ಹಾಗೂ ರಾತ್ರಿ 9 ಗಂಟೆಗೆ ತಾಯಿಯ ದರ್ಶನ ನಡೆಯಲಿದ್ದು, ರಾತ್ರಿ 9.30ಕ್ಕೆ ದಿಪೋತ್ಸವ ಪ್ರಾರಂಭವಾಗಲಿದೆ ಎಂದರು.

ದಿಪೋತ್ಸವ ದಿನದಂದು ನೈವೇದ್ಯ ಪ್ರಸಾದ, ಅನ್ನದಾನ, ದೇವಸ್ಥಾನದ ಹೂವಿನ ಅಲಂಕಾರ ಮತ್ತು ವಿದ್ಯುತ್ ದೀಪಾಂಕಾರಗಳನ್ನು ಮಾಡಲಿಚ್ಛಿಸುವವರು ಖುದ್ದಾಗಿ ದೇವಾಲಯದ ಆಡಳಿತ ಕಚೇರಿಯಲ್ಲಿ ವಿಚಾರಿಸುವಂತೆ ಮನವಿ ಮಾಡಿದರು.

ಶ್ರೀ ರಾಜರಾಜೇಶ್ವರಿ ದೇವಿಯ ಭಕ್ತರು ಹಾಗೂ ಮೂಡಾ ಅಧ್ಯಕ್ಷರಾದ ಚುಮ್ಮಿದೇವಯ್ಯ ಮಾತನಾಡಿ, ಅಮವಾಸ್ಯೆ ದೀಪೋತ್ಸವದ ಪ್ರಯುಕ್ತ ದೇವಾಲಯದ ಆಡಳಿತ ಮಂಡಳಿಯ ಸಹಕಾರದಿಂದ ತಾಯಿಯ ಗರ್ಭಗುಡಿ ಸುಂದರವಾಗಿ ಅಲಂಕೃತಗೊಳಿಸಲಾಗಿದ್ದು, ಈ ಬಾರಿ ವಿಶೇಷವಾಗಿ ಗರ್ಭಗುಡಿಯ ಬಾಗಿಲನ್ನು ಬೆಳ್ಳಿಯ ಹೊದಿಕೆಯಿಂದ ಅಲಂಕರಿಸಲಾಗಿದೆ. ಉತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 08272 224668, 223313, 94807 30523 ನ್ನು ಸಂಪರ್ಕಿಸಬಹು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದೇವಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಸಚಿನ್ ವಾಸುದೇವ್, ಸದಸ್ಯರಾದ ಹೆಚ್.ಎಸ್. ದೇವರಾಜು, ಭಕ್ತರು ಹಾಗೂ ಸಲಹೆಗಾರರಾದ ಕಿಶನ್ ಪೂವಯ್ಯ, ಭಕ್ತರಾದ ಎಸ್.ಎನ್.ಹರೀಶ್ ಉಪಸ್ಥಿತರಿದ್ದರು. (ಕೆಸಿಐ, ಎಂ.ಎನ್)

Leave a Reply

comments

Related Articles

error: