ಪ್ರಮುಖ ಸುದ್ದಿಮೈಸೂರು

ಕೀಳರಿಮೆ ಮೆಟ್ಟಿ ಸಾಧನೆಯಡೆಗೆ ಮುಖ ಮಾಡಿ : ಪ್ರೊ.ಮಹೇಶ್ಚಂದ್ರ ಗುರು

ಮೈಸೂರು. ಅ.21: ನಮ್ಮೊಂದಿಗೆ ಪ್ರಕೃತಿ ಹಾಗೂ ಸಂವಿಧಾನವಿದೆ ಆದ್ದರಿಂದ ಕೀಳರಿಮೆ ಮೆಟ್ಟಿ ಸಾಧನೆಯಡೆಗೆ ಮುಖ ಮಾಡಿ ಎಂದು ಪ್ರಗತಿಪರ ಚಿಂತಕರಾದ ಪ್ರೊ.ಮಹೇಶ್ಚಂದ್ರ ಗುರು ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಗುರುತು ತಂಡದ 71ನೇ ಕಾರ್ಯಕ್ರಮದಂಗವಾಗಿ ಇನ್ ಸ್ಪೈರ್ಡ್ ಇಂಡಿಯಾ ಫೌಂಡೇನ್ ನಿಂದ ಕೊಡಮಾಡಲ್ಪಡುವ ಪ್ರಸಕ್ತ ಸಾಲಿನ ಜಿ.ಶಾಂತ ಟೀಚರ್ಸ್ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರಾದ ಯುವ ಪತ್ರಕರ್ತ ನಂಜುಂಡಸ್ವಾಮಿ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿ, ನಂಜುಂಡಸ್ವಾಮಿಯವರಿಗೆ ಆತ್ಮ ವಿಶ್ವಾಸವಿದ್ದು. ಬಡ ದೀನದಲಿತರ. ನೋವುಂಡವರ ಕಷ್ಟಗಳಿಗೆ ಮಿಡಿಯುವ ಮನಸ್ಸಿದೆ. ಶೋಷಿತ ಸಮುದಾಯದ ಪ್ರತಿನಿಧಿಯಾಗಿದ್ದು.  ಧಮನಿತ ಶೋಷಿತರು ಬಗ್ಗೆ ಬರೆಯುವ ಯುವಕರ ಸಂಖ್ಯೆ ವಿರಳವಾಗಿದ್ದು ನಂಜುಂಡುಸ್ವಾಮಿ ಅವರಲ್ಲಿ ಭಿನ್ನವಾಗಿರುವರು ಎಂದು ಪ್ರಶಂಸಿದರು.

ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿಯಾಲಾಗುತ್ತಿದೆ, ಶೇ.60 ಎಷ್ಟು ಯುವಕರಿಗೆ ಕೌಶಲ್ಯವಿಲ್ಲ. ಉದ್ಯೋಗವಿಲ್ಲ. ಈ ಬಗ್ಗೆ ಯೋಚಿಸಬೇಕು. ಭಾವಾನಾತ್ಮಕ ವಿಷಯಗಳನ್ನು ಮುಂದಾಗಿಸಿಕೊಂಡು ಸರ್ಕಾರ ನಡೆಸುವುದು ತರವಲ್ಲ,  ಕಠಿಣ ಸಂದರ್ಭ ಸೂಕ್ತವಾಗಿ ರಾಜಕೀಯ ನಿರ್ಧಾರ ಮಾಡಲು ಯುವಕರು ವಿಫಲವಾಗಿದ್ದು. ಮತ ಹಾಕುವ ಮುನ್ನಾ ಯೋಚಿಸಿ ದೇಶದ ಭವಿಷ್ಯ ನಿರ್ಧರಿಸಬೇಕು. ಸಂಕಷ್ಟದಲ್ಲಿರುವವರು ದೇಶವನ್ನು ಬಚಾವ್ ಮಾಡುವ ಶಕ್ತಿ ತಮಗಿದ್ದು.ಅಭಿವೃದ್ಧಿ ಯೇ ಮೂಲಭೂತ ಮಂತ್ರವನ್ನಾಗಿಸಿಕೊಂಡು ಆತ್ಮವಲೋಕನ ಮಾಡಿಕೊಳ್ಳಿ ಎಂದು ಯುವ ಸಮೂಹಕ್ಕೆ ಕರೆ ನೀಡಿದರು.

ಯುವಕರು ದುಶ್ಚಟಗಳಿಂದ ದೂರವುಳಿದು ಬುದ್ದ. ಗಾಂಧಿ. ಲೋಹಿಯಾ ಭಾರತವನ್ನು ಕಟ್ಟಬೇಕು ಎಂದು ಕರೆ ನೀಡಿದರು.

ವಾರ್ತಾ ಮತ್ತ ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಆರ್.ರಾಜು. ಸಾಹಿತಿ ಬನ್ನೂರು ರಾಜು. ಜಗನ್ನಾಥ ಶಣೈ ಕಾರ್ಯಕ್ರಮದಲ್ಲಿ ಹಾಜರಿದ್ದ ನಂಜುಂಡ ಸ್ವಾಮಿಯವರನ್ನು ಮೈಸೂರು ಪೇಟಧರಿಸಿ, ಶಾಲು ಹೊದಿಸಿ ಸನ್ಮಾನಿಸಲಾಯಿತು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: