ಮನರಂಜನೆ

ಆಸ್ಕರ್ ಪ್ರಶಸ್ತಿಗೆ ಭಾಜನವಾದ ‘ಮೂನ್ ಲೈಟ್’

ನ್ಯೂಯಾರ್ಕ್ : ಚಿತ್ರರಂಗದ ಅತ್ಯುನ್ನತ ಪ್ರತಿಷ್ಠಿತ 89ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಗೆ ಪ್ರಸಕ್ತ ಸಾಲಿನ ‘ಮೂನ್ ಲೈಟ್‍’ ಚಿತ್ರ ಭಾಜನವಾಗಿದೆ.

ಚಿತ್ರ ಮಿಯಾಮಿ ಸಮುದಾಯದ ಕುರಿತು ಬೆಳಕು ಚೆಲ್ಲುವ ಕಥಾಹಂದರದ ನವಿರಾದ ಪಾತ್ರಾಭಿನಯದಿಂದ ಪ್ರೇಕ್ಷಕರನ್ನು ಮುಟ್ಟಿದೆ. ಮ್ಯಾಂಚೆಸ್ಟರ್ ಬೈ ದೀ ಸಿ ಚಿತ್ರದಲ್ಲಿನ ಅದ್ಭುತ ನಟನೆಗಾಗಿ ಕ್ಯಾಸಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದು,  ಲಾಲಾ ಲ್ಯಾಂಡ್ ಚಿತ್ರದಲ್ಲಿನ ಅಮೋಘ ನಟನೆಗಾಗಿ  ನಟಿ ಎಮ್ಮಾ ಸ್ಟೋನ್  ಅತ್ಯುತ್ತಮ ನಟಿಯಾಗಿ ಆಯ್ಕೆಯಾಗಿದ್ದಾರೆ.

2017ನೇ ಸಾಲಿನ ಆಸ್ಕರ್ ಪ್ರಶಸ್ತಿ ವಿಜೇತರ ಪಟ್ಟಿ :  ಅತ್ಯುತ್ತಮ ಚಿತ್ರ : ಮೂನ್ ಲೈಟ್ , ಅತ್ಯುತ್ತಮ ನಟ : ಕ್ಯಾಸಿ ಅಪ್ಲೆಕ್, (ಮ್ಯಾಂಚೆಸ್ಟರ್ ಬೈ ದಿ ಸೀ) ಅತ್ಯುತ್ತಮ ನಟಿ : ಎಮ್ಮಾ ಸ್ಟೋನ್ (ಲಾಲಾ ಲ್ಯಾಂಡ್), ಅತ್ಯುತ್ತಮ ಪೋಷಕ ನಟ : ಮಹರ್ಶಾಲಾ ಅಲಿ (ಲಾಲಾ ಲ್ಯಾಂಡ್),

ವಿಯೊಲಾ ಡೇವಿಸ್ ಅತ್ಯುತ್ತಮ ಪೋಷಕ ನಟಿಯಾಗಿ ಆಯ್ಕೆಗೊಂಡಿದ್ದು, ಆಸ್ಕರ್ ಪ್ರಶಸ್ತಿಗೆ ಭಾಜನಳಾದ ಮೊದಲ ಕಪ್ಪು ನಟಿಯಾಗಿ ಗುರುತಿಸಿಕೊಂಡಿದ್ದಾಳೆ.

2017ನೇ ಸಾಲಿನ ಅತ್ಯುತ್ತಮ ಚಿತ್ರ ಪ್ರಶಸ್ತಿಯೂ ಡೇಮಿಯಲ್ ಚಾಝೆಲ್ಲೆ ನಿರ್ದೇಶನದ ಅಮೆರಿಕಾದ ರೊಮ್ಯಾಂಟಿಕ್ ಕಾಮಿಡಿ ಚಿತ್ರ ಲಾಲಾ ಲ್ಯಾಂಡ್‍ಗೆ ಲಭಿಸಿದೆ. ಉತ್ತಮ ಪೋಷಕ ನಟ ಪ್ರಶಸ್ತಿಯು ಮಹೆರ್ಶಾಲಾ ಅಲಿ ಅವರ ಮೂನ್ ಲೈಟ್ ಚಿತ್ರದ ಅತ್ಯುತ್ತಮ ಅಭಿನಯಕ್ಕೆ ಲಭಿಸಿದೆ.

Leave a Reply

comments

Related Articles

error: