ಪ್ರಮುಖ ಸುದ್ದಿಮೈಸೂರು

ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ : ಗೋಕಾಕ್ ಮಾದರಿ ಚಳುವಳಿ

ಡಾ.ಶಿವರಾಜ್ ಕುಮಾರ್ ನೇತೃತ್ವಕ್ಕೆ ಒತ್ತಾಯ

ಮೈಸೂರು.ಅ.21 : ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಗೆ ಸರ್ಕಾರಗಳು ತಾಳಿರುವ ನಿರ್ಲಕ್ಷ್ಯ ಧೋರಣೆ ಖಂಡಿಸಿ ಗೋಕಾಕು ಚಳುವಳಿ ಮಾದರಿಯಲ್ಲಿ ಚಳುವಳಿ ನಡೆಸುವುದು ಅನಿವಾರ್ಯವಾಗಿದ್ದು, ಹಿರಿಯ ನಟರಾದ ಡಾ.ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ದರ್ಶನ್, ಯಶ್, ರವಿಚಂದ್ರ ಸೇರಿದಂತೆ ಚಂದನವನದ ನಟರ ನೇತೃತ್ವದಲ್ಲಿ ಚಳುವಳಿ ನಡೆಸುವುದು ಅನಿವಾರ್ಯವೆಂದು ಕದಂಬ ಸೈನ್ಯ ಕನ್ನಡ ಸಂಘಟನೆ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ತಿಳಿಸಿದರು.

ಪರಭಾಷಿಗರ ಹಾವಳಿಯಿಂದಾಗಿ ಸ್ಥಳೀಯರು ಉದ್ಯೋಗವಕಾಶದಿಂದ ವಂಚಿತರಾಗುತ್ತಿದ್ದು, ನಮ್ಮ ನೆಲದಲ್ಲಿಯೇ ನಾವು ಅಂತಂತ್ರರಾಗಿದ್ದು, ಬೀದಿ ಬದಿ ವ್ಯಾಪಾರ ನಡೆಸಲು ಸಾಧ್ಯವಾಗದಂತಹ ಸ್ಥಿತಿ ರಾಜ್ಯ ನಿರ್ಮಾಣವಾಗಿದೆ, ಆದ್ದರಿಂದ ಸ್ಥಳೀಯರ ಉದ್ಯೋಗ ಆದ್ಯತೆಗೆ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಸದನದಲ್ಲಿ ಮಂಡನೆಯಾಗಿಬೇಕೆಂದು ಆಗ್ರಹಿಸಿ ಇದೇ ಅ.30ರಂದು ಪತ್ರ ಚಳುವಳಿ ಹಮ್ಮಿಕೊಂಡಿದ್ದು, ಚಲನಚಿತ್ರರಂಗದ ಎಲ್ಲಾ ಹಿರಿಯ ನಟರೂ ಚಳುವಳಿಯಲ್ಲಿ ಭಾಗಿಯಾಗಬೇಕೆಂದು ಮನವಿ ಮಾಡಿಲಾಗುವುದು ಎಂದರು.

ಹೋರಾಟಗಾರರಾದ ಎ.ನಾಗೇಂದ್ರ, ಮಹದೇವಸ್ವಾಮಿ ಹಾಗೂ ಇತರರು ಹಾಜರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: