ಕ್ರೀಡೆ

ಫಾಲೋಆನ್‌ಗೆ ಒಳಗಾದ ದ.ಆಫ್ರಿಕಾ: ಟೀಂ ಇಂಡಿಯಾಗೆ 335 ರನ್‌ಗಳ ಬೃಹತ್ ಮುನ್ನಡೆ

ರಾಂಚಿ,ಅ.21-ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಫಾಲೋಆನ್ಗೆ ಗುರಿಯಾಗಿದೆ. ಇದರಿಂದ ಭಾರತ ತಂಡಕ್ಕೆ 335 ರನ್ಗಳ ಬೃಹತ್ ಮುನ್ನಡೆ ದೊರೆತಿದೆ.

ಟೀಂ ಇಂಡಿಯಾದ 497 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ್ದ ದ.ಆಫ್ರಿಕಾ ತಂಡ 162 ರನ್ ಗಳಿಗೆ ಆಲೌಟ್ ಆಗುವ ಮೂಲಕ ಫಾಲೋಆನ್ ಗೆ ಒಳಗಾಗಿದೆ. ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ದ.ಆಫ್ರಿಕಾದ ಆರಂಭ ಉತ್ತಮವಾಗಿರಲಿಲ್ಲ.

ಮಗೆದೂಮ್ಮೆ ಮಾರಕ ದಾಳಿ ಸಂಘಟಿಸಿದ ಉಮೇಶ್ ಯಾದವ್ ಹಾಗೂ ಮೊಹಮ್ಮದ್ ಶಮಿ, ಹರಿಣಗಳ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳಿಗೆ ಪೆವಿಲಿಯನ್ ದಾರಿ ತೋರಿಸಿದರು.

ಉಮೇಶ್ ದಾಳಿಯಲ್ಲಿ ಕ್ವಿಂಟನ್ ಡಿ ಕಾಕ್ (5) ಹಾಗೂ ಶಮಿ ದಾಳಿಗೆ ಜುಬೇರ್ ಹಮ್ಜಾ (0) ಕ್ಲೀನ್ ಬೌಲ್ಡ್ ಆದರು. ಡೆಬ್ಯು ವೀರ ಹಮ್ಜಾ ಮೊದಲ ಇನ್ನಿಂಗ್ಸ್ನಲ್ಲಿ ಆಕರ್ಷಕ ಅರ್ಧಶತಕ ಸಾಧನೆ ಮಾಡಿದ್ದರು. ಆದರೆ ದ್ವಿತೀಯ ಇನ್ನಿಂಗ್ಸ್ನಲ್ಲಿ ಆಟ ನಡೆಯಲಿಲ್ಲ. ಪರಿಣಾಮ 10 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಈಗಾಗಲೇ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿರುವ ಟೀಂ ಇಂಡಿಯಾ ಮೂರನೇ ಪಂದ್ಯವನ್ನು ಗೆದ್ದು ಸರಣಿ ಕ್ಲೀನ್ ಸ್ವಿಪ್ ಮಾಡುವ ಯೋಚನೆಯಲ್ಲಿದೆ. (ಎಂ.ಎನ್)

Leave a Reply

comments

Related Articles

error: