ಮೈಸೂರು

ಜ್ಞಾನಕ್ಕೆ ಯಾವುದೇ ಗಡಿಗಳಿಲ್ಲ: ಡಾ.ಕೆ.ದಿನೇಶ್

ಮೈಸೂರು,ಅ.21- ಜ್ಞಾನಕ್ಕೆ ಯಾವುದೇ ಗಡಿಗಳಿಲ್ಲ. ಸಮಗ್ರ ವಿಜ್ಞಾನ ಮತ್ತು ಅಂತರಶಿಕ್ಷಣ ಅಧ್ಯಯನಗಳು ಜ್ಞಾನವನ್ನು ಪಡೆಯಲು ಉತ್ತಮ ಮಾರ್ಗವಾಗಿವೆ ಎಂದು ಇನ್ ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕರಾದ ಡಾ.ಕೆ.ದಿನೇಶ್ ಹೇಳಿದರು.

ರಾಜ್ಯ ಸರ್ಕಾರ, ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ, ರಾಷ್ಟ್ರೀಯ ಉಚ್ಚತರ್ ಶಿಕ್ಷಾ ಅಭಿಯಾನ್, ಮೈಸೂರು ವಿಶ್ವವಿದ್ಯಾನಿಲಯ ಸಂಯುಕ್ತಾಶ್ರಯದಲ್ಲಿ ಸೋಮವಾರ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಬದಲಾವಣೆಗೆ ವೇಗವರ್ಧಕವಾಗಿ ವಿಶ್ವವಿದ್ಯಾನಿಲಯ ಎಂಬ ವಿಷಯದ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಯುವಸಮೂಹಕ್ಕೆ ತಂತ್ರಜ್ಞಾನ ಮತ್ತು ವಿಜ್ಞಾನದ ಸಹಕಾರ ಇರುವುದರಿಂದ ಎಲ್ಲವೂ ಸರಳವಾಗಿ ಸಿಗುತ್ತದೆ. ಆದರೆ, ಪರಿಶ್ರಮದಿಂದ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ. ಯಾವುದೇ ವ್ಯಕ್ತಿ ಯಶಸ್ಸು ಪಡೆಯಬೇಕಾದರೆ ಸಪ್ತ ಸೂತ್ರಗಳನ್ನು ಅನುಸರಿಸಬೇಕು. ಅವುಗಳೆಂದರೆ ಸಾಹಸ ಮನೋಭಾವ, ನಿಮ್ಮನ್ನು ನೀವು ನಂಬುವುದು, ಸೃಜನಶೀಲತೆ, ಕನಸು ಕಾಣುವುದು, ಯೋಜನೆ ಅನುಷ್ಠಾನ, ಸಾಮಾಜಿಕ ಕಳಕಳಿ, ಆವಿಷ್ಕಾರ. ಇವಿಷ್ಟು ನಿಮ್ಮಲ್ಲಿದ್ದರೆ ಖಂಡಿತಾ ಯಶಸ್ಸು ಕಟ್ಟಿಟ್ಟ ಬುತ್ತಿ. ನಿಮ್ಮ ಸಾಮರ್ಥ್ಯವನ್ನು ಅರಿತುಕೊಂಡು ಗುರಿಯತ್ತ ಮುನ್ನಗಬೇಕು ಎಂದರು.

ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಠ ಇರುವವರಿಗೆ ಸವಾಲುಗಳು ಸಾಲು ಸಾಲಾಗಿ ಬರುತ್ತವೆ. ಇನ್ ಪೋಸಿಸ್ ಸಂಸ್ಥೆ ಸ್ಥಾಪನೆ ಮಾಡಿದಾಗಲೂ ಸವಾಲುಗಳು ಇದ್ದವು. ಇಂದು ಕೂಡ ಸವಾಲುಗಳಿವೆ. ಹಾಗಂತ ಹಿಡಿದ ಕೆಲಸವನ್ನು ಅರ್ಧಕ್ಕೆ ನಿಲ್ಲಿಸದೆ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕು. ಹಾಗೇ ಮೆಟ್ಟಿ ನಿಂತಿದ್ದ ಪರಿಣಾಮ ಇಂದು ಇನ್ ಪೋಸಿಸ್ ಸಂಸ್ಥೆ ಜಗತ್ತಿನಲ್ಲೇ 3 ಮೂರನೇ ಅತಿದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎ.ಕೋರಿ, ಇಂಡಿಯನ್ ಸೈನ್‌ಸ್‌ ಕಾಂಗ್ರೆಸ್‌ನ ಅಧ್ಯಕ್ಷ ಪ್ರೊ.ಕೆ.ಎಸ್.ರಂಗಪ್ಪ, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್, ಶಿಕ್ಷಣ ತಜ್ಞರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. (ಜಿ.ಕೆ, ಎಂ.ಎನ್)

 

Leave a Reply

comments

Related Articles

error: