ಸುದ್ದಿ ಸಂಕ್ಷಿಪ್ತ

ಅಕ್ಟೋಬರ್ 24 ರಿಂದ 27 ರವರೆಗೆ ಕೃಷಿ ಮೇಳ

ಮಂಡ್ಯ (ಅ.21): ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಬೆಂಗಳೂರು ಇಲ್ಲಿ ಅಕ್ಟೋಬರ್ 24 ರಿಂದ 27 ರವರೆಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕೃಷಿ ಮೇಳವನ್ನು ಆಯೋಜಿಸಲಾಗಿದೆ.

ಅಕ್ಟೋಬರ್ 26 ರಂದು ಮಂಡ್ಯ ಜಿಲ್ಲೆಯಿಂದ ವಿವಿಧ ಕೃಷಿ ಪ್ರಶಸ್ತಿಗಳಿಗೆ ಆಯ್ಕೆಯಾಗಿರುವ ಪ್ರಗತಿ ಪರ ರೈತ / ರೈತ ಮಹಿಳೆಯರನ್ನು ಸನ್ಮಾನಿಸಲಾಗುತ್ತಿದ್ದು, ಜಿಲ್ಲೆಯ ರೈತ / ರೈತ ಮಹಿಳೆಯರು ಮತ್ತು ಜಿಲ್ಲೆಯ ಅಭಿವೃದ್ಧಿ ಇಲಾಖೆಗಳ ವಿಸ್ತರಣಾ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲು ತಿಳಿಸಲಾಗಿದೆ.

(ಎನ್.ಬಿ)

Leave a Reply

comments

Related Articles

error: