ಮೈಸೂರು

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಫೋಟ ಪ್ರಕರಣ : ಮೈಸೂರಿನಲ್ಲಿಯೂ ಹೈ ಅಲರ್ಟ್

ಮೈಸೂರು, ಅ.22:-  ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಬಾಕ್ಸ್ ಸ್ಫೋಟಗೊಂಡು ವ್ಯಕ್ತಿಯೊಬ್ಬನ ಕೈ ತುಂಡಾದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಮೈಸೂರಿನಲ್ಲಿಯೂ  ಹೈ ಅಲರ್ಟ್ ಘೋಷಿಸಲಾಗಿದೆ.

ನಗರದ ರೈಲು ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಏರ್ಪಡಿಸಲಾಗಿದ್ದು,    ಶ್ವಾನದಳ, ಬಾಂಬ್ ನಿಷ್ಟ್ರಿಯ ದಳದಿಂದ ರೈಲು ನಿಲ್ದಾಣದಲ್ಲಿ ಇಟ್ಟಿದ್ದ ಲಗೇಜ್‌ಗಳು, ಬ್ಯಾಗ್‌ಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ.

ರೈಲು ನಿಲ್ದಾಣದಲ್ಲಿ ಸ್ಫೋಟದ ಸುದ್ದಿ ಪ್ರಕಟವಾಗುತ್ತಿದ್ದಂತೆ ಅಲರ್ಟ್ ಆದ ರೈಲ್ವೆ ಪೊಲೀಸರು ಬಾಂಬ್ ಮತ್ತು ಶ್ವಾನ ದಳದೊಂದಿಗೆ ನಿಲ್ದಾಣದ ಆವರಣದಲ್ಲಿ ಹಾಜರಾಗಿ ಕಟ್ಟೆಚ್ಚರ ವಹಿಸಿದರು. ಪೊಲೀಸರ ತಪಾಸಣೆಗೆ ಜನತೆ ಕೂಡ ಸಹಕಾರ ನೀಡಿದರು.

ಈ ಕುರಿತು ಡಿಸಿಪಿ ಎಂ ಮುತ್ತುರಾಜ್ ಮಾಹಿತಿ ನೀಡಿ ಮೈಸೂರು ಪ್ರವಾಸಿ ತಾಣವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು,  ಪ್ರವಾಸಿ ತಾಣಗಳಲ್ಲಿಯೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ನಿರಂತರವಾಗಿ ತಪಾಸಣೆ ಕಾರ್ಯ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ. ಹುಬ್ಬಳ್ಳಿಯಲ್ಲಿ ಸಂಭವಿಸಿದ ಸ್ಫೋಟದಿಂದ ಇನ್ನಷ್ಟು ಭದ್ರತೆ ಹೆಚ್ಚಿಸಲಾಗಿದೆ ಎಂದು   ತಿಳಿಸಿದ್ದಾರೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: