ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಗೋಲ್ಡನ್ ಸ್ಟಾರ್ ಗಣೇಶ್ ವಿರುದ್ಧ ನಿರ್ದೇಶಕ ಎಸ್. ನಾರಾಯಣ್ ಮಾನನಷ್ಟ ಮೊಕದ್ದಮೆ ದಾಖಲು

ಮುಂಗಾರು ಮಳೆಯ ಖ್ಯಾತಿಯ ನಟ ಗೋಲ್ಟನ್ ಸ್ಟಾರ್ ಗಣೇಶ್ ವಿರುದ್ಧ.  ನಟ, ನಿರ್ದೇಶಕ ಹಾಗೂ ನಿರ್ಮಾಪಕ ಎಸ್.ನಾರಾಯಣ ಮಾನನಷ್ಟ ಮೊಕದ್ದಮೆ ನೋಟೀಸ್ ನೀಡಿದ್ದಾರೆ.

ಮೋಕ್ಷ ಅಗರಬತ್ತಿ ಕಂಪನಿ ಮತ್ತು ನಟ ಗೋಲ್ಡನ್ ಸ್ಟಾರ್ ವಿರುದ್ದ ಕಾನೂನು ಸಮರಕ್ಕೆ ದಾರಿಯಾಗಿದೆ, ‘ಚೆಲುವಿನ ಚಿತ್ತಾರ’ ಚಿತ್ರ ಪ್ರಚಾರಕ್ಕೆ ನಿರ್ದೇಶಕ ಎಸ್.ನಾರಾಯಣ್ ಒಪ್ಪಂದ ಮಾಡಿಕೊಂಡಿದ್ದರು ಆದರೆ ಅಗರಬತ್ತಿ ಕಂಪನಿಯೂ ಒಪ್ಪಂದದ ಅವಧಿ ಮುಗಿದ್ದದರು ತಮ್ಮ ಚಿತ್ರದ ಹೆಸರನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದರ ವಿರುದ್ಧ ಕೆಂಡಮಂಡಲವಾಗಿರುವ ಗಣೇಶ್ ಕಾನೂನು ಸಮರಕ್ಕಿಳಿದಿದ್ದಾರೆ.

ಮೋಕ್ಷ ಅಗರಬತ್ತಿ ಜಾಹೀರಾತು ಕಂಪನಿ ವಿರುದ್ಧ ಗಣೇಶ್ ದಾಖಲಿಸಿದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಚೆಲುವಿನ ಚಿತ್ತಾರ ಚಿತ್ರದ ನಿರ್ದೇಶಕ ನಾರಾಯಣ್ ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.

ಗಣೇಶ್ ದೂರು ದಾಖಲಿಸಿರುವ ಹಿನ್ನೆಲೆಯಲ್ಲಿ ತಮಗೂ ಸಮನ್ಸ್ ಬಂದಿದ್ದು ಮಾನಹಾನಿಯುಂಟಾಗಿದೆ ಎಂದು ದೂರಿರುವ ನಾರಾಯಣ,  ಗಣೇಶ್ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ವಕೀಲ ಮೂಲಕ ನೋಟೀಸ್ ನೀಡಿದ್ದಾರೆ.

Leave a Reply

comments

Related Articles

error: