ಪ್ರಮುಖ ಸುದ್ದಿಮೈಸೂರು

ಧಾರಾಕಾರವಾಗಿ ಸುರಿದ ಮಳೆಗೆ ಕೆ.ಆರ್.ಪೇಟೆ ಮೈಸೂರು ಮುಖ್ಯ ರಸ್ತೆಯಲ್ಲಿ ಉಕ್ಕಿ ಹರಿದ ನೀರು : ಸಂಚಾರ ಬಂದ್

ಮೈಸೂರು/ಮಂಡ್ಯ,ಅ.22:-  ರಾತ್ರಿಯಿಂದ  ಧಾರಾಕಾರವಾಗಿ ಚಿತ್ತಾ ಮಳೆ ಸುರಿದಿದ್ದು, ಕೆ.ಆರ್.ಪೇಟೆ  ಮೈಸೂರು ಮುಖ್ಯ ರಸ್ತೆಯಲ್ಲಿ ಮಳೆ ನೀರು ಉಕ್ಕಿ ಹರಿಯುತ್ತಿದೆ.

ಕೆ.ಆರ್.ಪೇಟೆ ಮೈಸೂರು ರಸ್ತೆಯಲ್ಲಿ  ಕಿಲೋ ಮೀಟರ್ ಉದ್ದಕ್ಕೆ ಸಾಲುಗಟ್ಟಿ ವಾಹನಗಳು ನಿಂತಿದ್ದು, ಸಂಚಾರ ಬಂದ್ ಆಗಿದೆ.  ಮೈಸೂರಿಗೆ ಹೋಗುವ ಬಸ್ ಗಳನ್ನು ಕೆ.ಎಸ್.ಆರ್.ಟಿ.ಸಿ ಸಾರಿಗೆ ಇಲಾಖೆ ಬಂದ್ ಮಾಡಿದೆ. ಮಳೆಯಿಂದ ದೂರದೂರಿಗೆ ಪ್ರಯಾಣಿಸುವ ಪ್ರಯಾಣಿಕರು ತತ್ತರಿಸಿ ಹೋಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: