ಮನರಂಜನೆ

ಹುಟ್ಟುಹಬ್ಬದ ಸಂಭ್ರಮದಲ್ಲಿ ಜೋಗಿ ಪ್ರೇಮ್: ಅದ್ಧೂರಿಯಾಗಿ ನಡೆದ ಬರ್ತ್ ಡೇ ಪಾರ್ಟಿ

ಬೆಂಗಳೂರು,ಅ.22-ನಿರ್ದೇಶಕ ಜೋಗಿ ಪ್ರೇಮ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 41 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪ್ರೇಮ್ ಅವರ ಬರ್ತ್ ಡೇ ಪಾರ್ಟಿ ನಿನ್ನೆ ರಾತ್ರಿಯೇ ಅದ್ಧೂರಿಯಾಗಿ ನಡೆದಿದೆ.

ಹುಟ್ಟುಹಬ್ಬದ ಸಂಭ್ರಮದ ಕ್ಷಣಗಳ ಫೋಟೋಗಳನ್ನು ರಕ್ಷಿತಾ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರೀತಿಯ ಪತಿಗೆ ರಕ್ಷಿತಾ ಶುಭಾಶಯ ತಿಳಿಸಿದ್ದಾರೆ.

ಪ್ರೇಮ್ ಹಾಗೂ ರಕ್ಷಿತಾ ಕುಟುಂಬ, ಸ್ನೇಹಿತರು, ರಚಿತಾ ರಾಮ್, ಗಾಯಕ ನವೀನ್ ಸಜ್ಜು, ಕಾಮಿಡಿ ಕಿಲಾಡಿಗಳು ಕಲಾವಿದರು ಹಾಗೂ ಪ್ರೇಮ್ ತಂಡ ಸೇರಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿದರು. ಕೇಕ್ ಕಟ್ ಮಾಡಿ ಪ್ರೇಮ್ ಸಂಭ್ರಮ ಪಟ್ಟರು.

ರಕ್ಷಿತಾಗೆ ಆಪ್ತ ಗೆಳತಿಯಾಗಿರುವ ರಚಿತಾ ಖುಷಿಯ ಸಂದರ್ಭದಲ್ಲಿ ಜೊತೆಗೆ ಇದ್ದರು. ಪಾರ್ಟಿಯಲ್ಲಿ ರಕ್ಷಿತಾ ಹಾಗೂ ರಚಿತಾ ಇಬ್ಬರು ಸುಂಟರಗಾಳಿ ಹಾಡಿಗೆ ಮಸ್ತ್ ಡ್ಯಾನ್ಸ್ ಮಾಡಿದರು. ‘ದಿ ವಿಲನ್ಸಿನಿಮಾದ ಹಾಡನ್ನೂ ರಚಿತಾ ಹಾಡಿದರು.

ದಿ ವಿಲನ್ಸಿನಿಮಾದ ನಂತರ ಪ್ರೇಮ್ಏಕ್ ಲವ್ ಯಾಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಮೂಲಕ ರಕ್ಷಿತಾ ಸಹೋದರ ರಾಣಾ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾವಾಗಿದೆ. ಉಳಿದಂತೆ, ಪ್ರೇಮ್ ನಟನೆಯಗಾಂಧಿಗಿರಿಸಿನಿಮಾದ ಬಿಡುಗಡೆ ಇನ್ನು ಬಾಕಿ ಇದೆ. (ಎಂ.ಎನ್)

Leave a Reply

comments

Related Articles

error: