ದೇಶಪ್ರಮುಖ ಸುದ್ದಿ

ನಾಲ್ಕು ರಾಜ್ಯಗಳಾಗಿ ಉತ್ತರ ಪ್ರದೇಶ ವಿಭಜನೆ : ಮಾಯಾವತಿ ಚುನಾವಣಾ ಭರವಸೆ

ಲಖನೌ: ಬಿಎಸ್‍ಪಿ ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶವನ್ನು ಆಡಳಿತಾತ್ಮಕ ಅನುಕೂಲದ ದೃಷ್ಟಿಯಿಂದ ನಾಲ್ಕು ರಾಜ್ಯಗಳಾಗಿ ವಿಭಜಿಸಲಾಗುವುದು ಎಂದು ಬಹುಜನ ಪಕ್ಷದ ನಾಯಕಿ ಮಾಯಾವತಿ ತಿಳಿಸಿದ್ದಾರೆ.

ಸೋಮವಾರ ಗೋರಖ್‍ಪುರದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮಾಯಾವತಿ, ಗೋರರ್‍ಪುರ ಪೂರ್ವ ಉತ್ತರ ಪ್ರದೇಶದ ಕೇಂದ್ರಸ್ಥಾನವಾಗಿದೆ. ರಾಜ್ಯ ವಿಭಜನೆಯಾದರೆ ಪೂರ್ವಾಂಚಲಕ್ಕೆ ಭಾಗದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಪೂರ್ವಾಂಚಲ ಭಾಗವನ್ನು ನಿರಂತರವಾಗಿ ಕಡೆಗಣಿಸಲಾಗುತ್ತಿದೆ ಎಂದಿದ್ದಾರೆ.

ಪ್ರತ್ಯೇಕ ರಾಜ್ಯವಾಗುವವರೆಗೆ ನಿಮ್ಮ ಜಿಲ್ಲೆ ಅಭಿವೃದ್ಧಿ ಕಾಣಲ್ಲ. ಬಿಎಸ್ಪಿ ಅಧಿಕಾರಕ್ಕೆ ಬಂದರೆ ಪ್ರತ್ಯೇಕ ರಾಜ್ಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಾಯಾವತಿಯವರು ಮತದಾರರಿಗೆ ಭರವಸೆ ನೀಡಿದರು. ಈ ಪ್ರದೇಶದಲ್ಲಿ ಮಾರ್ಚ್ 4ರಂದು ಆರನೇ ಹಂತದ ಮತದಾನ ನಡೆಯಲಿದೆ.

ಮಾಯಾವತಿ ಅವರು 2011 ರಲ್ಲೇ ಉತ್ತರ ಪ್ರದೇಶವನ್ನು ಪೂರ್ವಾಂಚಲ, ಬುಂದೇಲ್‌ಖಂಡ, ಅವಧ್ ಹಾಗೂ ಪಶ್ಚಿಮ ಉತ್ತರ ಪ್ರದೇಶ ಎಂದು ನಾಲ್ಕು ರಾಜ್ಯಗಳಾಗಿ ವಿಭಜನೆ ಮಾಡುವ ಮಸೂದೆಯನ್ನು ವಿಧಾಸಭೆಯಲ್ಲಿ ಅಂಗೀಕರಿಸಿದ್ದರು ಎಂಬುದು ಗಮನಾರ್ಹ.

Leave a Reply

comments

Related Articles

error: