ಕ್ರೀಡೆದೇಶ

ಪ್ರಧಾನಿ ಮೋದಿಯ `ಭಾರತ್ ಕಿ ಲಕ್ಷ್ಮೀ’ ಅಭಿಯಾನಕ್ಕೆ ಪಿ.ವಿ.ಸಿಂಧು ಬೆಂಬಲ

ನವದೆಹಲಿ,ಅ.22-ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ವೇಳೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು `ಭಾರತ್ ಕಿ ಲಕ್ಷ್ಮೀ’ ಅಭಿಯಾನವನ್ನು ಆರಂಭಿಸಿದ್ದಾರೆ. ಈ ಅಭಿಯಾನಕ್ಕೆ ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ತಾರೆ  ಪಿ.ವಿ.ಸಿಂಧು ಬೆಂಬಲ ಸೂಚಿಸಿದ್ದಾರೆ.

ಅಭಿಯಾನಕ್ಕೆ ಬೆಂಬಲ ಸೂಚಿಸಿರುವ ಪಿ.ವಿ.ಸಿಂಧು ಟ್ವಿಟರ್ ನಲ್ಲಿ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಮಹಿಳೆಯರಿಗೆ ಅಧಿಕಾರ ನೀಡಿದಾಗ ಮತ್ತು ಅವರ ಸ್ಥಾನಗಳಿಗೆ ಹೆಮ್ಮೆಯ ಸ್ಥಾನವನ್ನು ನೀಡಿದಾಗ ಸಮಾಜಗಳು ಬೆಳೆಯುತ್ತವೆ. ನಾನು ಪ್ರಧಾನಿ ಮೋದಿ ಅವರ `ಭಾರತ್ ಕಿ ಲಕ್ಷ್ಮೀ’ ಅಂದೋಲನವನ್ನು ಬೆಂಬಲಿಸುತ್ತೇನೆ. ಭಾರತದ ಅಸಾಧಾರಣ ಮಹಿಳೆಯರ ಅಸಾಧಾರಣ ಸಾಧನೆಗಳನ್ನು ಸಂಭ್ರಮಿಸೋಣ. ದೀಪಾವಳಿಗೆ ನಾವೆಲ್ಲರೂ ಸ್ತ್ರೀತ್ವವನ್ನು ಆಚರಿಸೋಣ ಎಂದಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದೇಶದ ಹೆಣ್ಣು ಮಕ್ಕಳನ್ನು ಗುರುತಿಸುವ ಸಲುವಾಗಿ ಮನ್ ಕೀ ಬಾತ್ನಲ್ಲಿ ನರೇಂದ್ರ ಮೋದಿ ಭಾರತ್ ಕಿ ಲಕ್ಷ್ಮೀ ಅಭಿಯಾನವನ್ನು ಆರಂಭಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಭಾರತ್ ಕಿ ಲಕ್ಷ್ಮೀ ಎಂಬ ವಿಶೇಷ ಹ್ಯಾಶ್ಟ್ಯಾಗ್ ಬಳಕೆ ಮಾಡುವಂತೆ ಪ್ರಧಾನಿ ಮನವಿ ಮಾಡಿಕೊಂಡಿದ್ದರು.

ಸಾಮಾಜಿಕ ಜಾಲತಾಣಗಳ ಮೂಲಕ ಹೆಣ್ಣು ಮಕ್ಕಳ ಸಾಧನೆಯನ್ನು ಗುರುತಿಸಲು ಪ್ರಧಾನಿ ಮೋದಿ ವಿಶೇಷ ಅಭಿಯಾನ ಆರಂಭಿಸಿದ್ದಾರೆ. ಭಾರತ್ ಕೀ ಲಕ್ಷ್ಮೀ ಅಂದರೆ ದೇಶ ಹಾಗೂ ಜನರ ಯಶಸ್ಸಿನ ಹಾದಿಯನ್ನು ಬಲಪಡಿಸುವುದಾಗಿದೆ ಎಂದು ಮೋದಿ ತಮ್ಮ ಸಂದೇಶದಲ್ಲಿ ತಿಳಿಸಿದ್ದರು. (ಎಂ.ಎನ್)

Leave a Reply

comments

Related Articles

error: