ಮೈಸೂರು

ಉರುಳಿ ಬಿದ್ದ ಕಾರು : ಇಬ್ಬರು ಯುವಕರು ಸಾವು

ಹುಂಡೈ ವರ್ಣ ಕಾರೊಂದು ಉರುಳಿಬಿದ್ದ ಪರಿಣಾಮ ಯುವಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

ಮೃತರನ್ನು ಮಂಡ್ಯ ನಿವಾಸಿಗಳಾದ  ದರ್ಶನ್(28), ಮಿಥುನ್(30)  ಎಂದು ಗುರುತಿಸಲಾಗಿದೆ.  ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿಯ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಮಂಡ್ಯದಿಂದ ಮೈಸೂರಿಗೆ ತೆರಳುತ್ತಿದ್ದಾಗ  ಈ ದುರ್ಘಟನೆ ಸಂಭವಿಸಿದೆ.  ಬೈಕ್ ಗೆ  ಕಾರು  ಡಿಕ್ಕಿ ಹೊಡೆಯುವುದನ್ನು  ತಪ್ಪಿಸಲು ಹೋಗಿ ಪಕ್ಕಕ್ಕೆ ಜರುಗಿದ ಕಾರು ಕೆಳಕ್ಕೆ ಉರುಳಿ ಬಿದ್ದಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಉರುಳಿ ಬಿದ್ದ ರಭಸಕ್ಕೆ ಕಾರಿನಲ್ಲಿದ್ದವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.   ಶ್ರೀರಂಗಪಟ್ಟಣದ ಗ್ರಾಮಾಂತರ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: