ಪ್ರಮುಖ ಸುದ್ದಿಮೈಸೂರು

ಹಿರಿಯ ಸಾಹಿತಿ ಪ್ರೊ.ಸಿ.ಪಿ.ಸಿದ್ಧಾಶ್ರಮ ಅಭಿನಂದನೆ : ಕೃತಿ ಬಿಡುಗಡೆ.24.

ಮೈಸೂರು.ಅ.22 : ಹಿರಿಯ ಸಾಹಿತಿ ಪ್ರೊ.ಸಿ.ಪಿ.ಸಿದ್ಧಾಶ್ರಮ ಅವರ ಅಭಿನಂದನಾ ಸಮಾರಂಭ ಹಾಗೂ ವಿಚಾರ ಸಂಕಿರಣವನ್ನು ಅ.24ರಂದು ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರೊ.ಸಿ.ಪಿ.ಸಿದ್ಧಾಶ್ರಮ ಅಭಿನಂದನಾ ಸಮಿತಿಯ ಪ್ರೊ.ತಳವಾರ್ ಅವರು ತಿಳಿಸಿದರು.

ಮಂಗಳವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಳಗ್ಗೆ 10 ಗಂಟೆಗೆ ಪ್ರೊ.ರಾಮೇಗೌಡ ಉದ್ಆಟಿಸುವರು, ವಿದ್ವಾಂಸರಾದ ಪ್ರೊ.ಲಕ್ಷ್ಮೀನಾರಾಯಣ ಅರೋರ ಮುಖ್ಯ ಅತಿಥಿಯಾಗಿರುವರು, ಪ್ರೊ.ಶಾಮಸುಂದರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಮಧ್ಯಾಹ್ನ 12 ಗಂಟೆಯಿಂದ ನಡೆಯುವ ಗೋಷ್ಠಿಗಳಲ್ಲಿ ಡಾ.ಎಚ್.ಎಲ್.ಶೈಲಾ, ಡಾ.ಡಿ.ಕೆ.ಚಿತ್ತಯ್ಯ ಪೂಜಾರ್, ಡಾ.ಎಸ್.ಡಿ.ಶಶಿಕಲಾ ಡಾ.ಜಿ.ಪ್ರಶಾಂತ ನಾಯಕ್, ಡಾ.ಕೆ.ತಿಮ್ಮಯ್ಯ, ಡಾ.ಎಂ.ಮಹೇಂದ್ರ ಮೂರ್ತಿ, ಡಾ.ಕುಪ್ನಳ್ಳಿ ಎಂ.ಭೈರಪ್ಪ ಇವರುಗಳು ಪ್ರೊ.ಸಿ.ಪಿ.ಸಿದ್ಧಾಶ್ರಮ ಅವರ ಕಾವ್ಯ ಆಧುನಿಕ ವಚನ, ಆತ್ಮಕಥೆ, ಸಂಶೋಧನೆ, ಸಾಹಿತ್ಯ ವಿಮರ್ಶೆ, ಸಂಸ್ಕೃತಿ ಚಿಂತನೆ ಬಗ್ಗೆ ವಿಷಯ ಮಂಡಿಸಲಿದ್ದಾರೆ ಎಂದರು.

ಸಂಜೆ 4 ಗಂಟೆಗೆ ಅಭಿನಂದನಾ ಸಮಾರಂಭದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಸಾನಿಧ್ಯ, ಪ್ರೊ.ಗುರುಲಿಂಗ ಕಾಪಸೆ ಇವರು ಬಯಲು ಆಲಯ ಹಾಗೂ ಅರಿವಿನ ಬೆರಗು ಕೃತಿ ಬಿಡುಗಡೆಗೊಳಿಸುವರು. ನಂತರ ಅಭಿನಂದನಾ ಗ್ರಂಥ ಹರಿಗೋಲು ಕೃತಿಯನ್ನು ಪ್ರೊ.ರಾಮೇಗೌಡ ಬಿಡುಗಡೆಗೊಳಿಸಲಿದ್ದಾರೆ . ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಅಧ್ಯಕ್ಷತೆ ವಹಿಸಲಿದ್ದು ನಂತರ ಸಿದ್ಧಾಶ್ರಮ ದಂಪತಿಯನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ಕಾರ್ಯದರ್ಶಿ ಡಾ.ಡಿ.ರವಿ, ಡಾ.ಕೆ.ಚಂದ್ರಕಾಂತ್,ಡಾ.ಕೆ.ತಿಮ್ಮಯ್ಯ, ಡಾ.ಜಿ.ಶ್ರೀನಿವಾಸ್ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: