ಕ್ರೀಡೆದೇಶ

ಭಾರತೀಯ ಸೇನೆಯಲ್ಲಿ ಬಳಸಲಾಗಿದ್ದ ನಿಸಾನ್ ಜೋಂಗಾ ಜೀಪ್‌ ಖರೀದಿಸಿದ ಧೋನಿ

ರಾಂಚಿ,ಅ.22-ವಿಶ್ವಕಪ್‌ ಟೂರ್ನಿ ಬಳಿಕ ಕ್ರಿಕೆಟ್ ನಿಂದ ದೂರ ಉಳಿದಿರುವ ಟೀಂ ಇಂಡಿಯಾದ ಹಿರಿಯ ಅನುಭವಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿ ಕುರಿತಾಗಿ ಚರ್ಚೆ ನಡಯುತ್ತಲೇ ಇದೆ. ಇದ್ಯಾವುದಕ್ಕೂ ಕಿವಿಗೊಡದ ಧೋನಿ ಫ್ಯಾಮಿಲಿಯೊಂದಿಗೆ ಸಮಯ ಕಳೆಯುತ್ತಿದ್ದಾರೆ.

ಈ ನಡುವೆ ಧೋನಿ ತಮ್ಮ ಕಾರ್ ಸಂಗ್ರಹಕ್ಕೆ ಮತ್ತೊಂದು ಜೀಪ್ ಅನ್ನು ಸೇರ್ಪಡೆಗೊಳಿಸಿಕೊಂಡಿದ್ದಾರೆ. ಭಾರತೀಯ ಸೇನೆಯಲ್ಲಿ ಬಳಸಲಾಗಿದ್ದ ಜೀಪ್‌ ಒಂದನ್ನು ಖರೀದಿ ಮಾಡಿದ್ದಾರೆ. ಅಪರೂಪದ, ಹಳೆಯ ಹಾಗೂ ಐಶಾರಾಮಿ ಕಾರು ಮತ್ತು ಬೈಕ್‌ಗಳನ್ನು ಸಂಗ್ರಹಿಸುವುದು ಧೋನಿ ಅವರ ಅಭ್ಯಾಸ.

ಇದೀಗ ನಿಸಾನ್ ಜೋಂಗಾ ಜೀಪ್‌ ಖರೀದಿ ಮಾಡಿರುವ ಧೋನಿ, ರಾಂಚಿಯ ರಸ್ತೆಗಳಲ್ಲಿ ಸುತ್ತಾಡಿರುವ ಫೋಟೊಗಳು ಸೋಷಿಯಲ್ಲಿ ಮೀಡಿಯಾದಲ್ಲಿ ವೈರಲ್‌ ಆಗಿದೆ.

ತಮ್ಮ ನೂತನ ಜೀಪ್‌ನಲ್ಲಿ ಸವಾರಿಗೆ ಹೊರಟ ಧೋನಿ ಹತ್ತಿರದ ಪೆಟ್ರೋಲ್‌ ಪಂಪ್‌ ಒಂದರಲ್ಲಿ ಕಾಣಿಸಿಕೊಂಡಾಗ  ಅಭಿಮಾನಿಗಳ ಜನಸಾಗರವೇ ಅಲ್ಲಿ ಸೇರಿದೆ. ಅಭಿಮಾನಿಗಳಿಗೆ ನಿರಾಸೆ ಮಾಡದ ಧೋನಿ ಹಸ್ತಾಕ್ಷರ ನೀಡಿ ಫೋಟೊಗೆ ಪೋಸ್‌ ನೀಡಿದ್ದಾರೆ.

ಧೋನಿ ತಮ್ಮ ಗ್ಯಾರೆಜ್‌ನಲ್ಲಿ ಈಗಾಗಲೇ ಐಶಾರಾಮಿ ಕಾರ್‌ಗಳಾದ ಫೆರಾರಿ 599 ಜಿಟಿಒ, ಹಮ್ಮರ್‌ ಎಚ್‌2 ಮತ್ತು ಜಿಎಮ್‌ಸಿ ಸಿಯೆರಾ ಹೊಂದಿದ್ದಾರೆ. ದ್ವಿಚಕ್ರ ವಾಹನಗಳ ಪೈಕಿ ಖಾವಸಾಕಿ ನಿಂಜಾ ಎಚ್‌2, ಕಾನ್ಫೆಡರೇಟ್‌ ಹೆಲ್‌ಕ್ಯಾಟ್‌, ಬಿಎಸ್‌ಎ, ಸುಝುಕಿ ಹಯಬೂಸಾ ಮತ್ತು ನಾರ್ಟನ್‌ ವಿಂಟೇಜ್‌ ಸೇರಿದಂತೆ ಮೊದಲಾದ ಬೈಕ್‌ಗಳನ್ನು ಹೊಂದಿದ್ದಾರೆ. (ಎಂ.ಎನ್)

Leave a Reply

comments

Related Articles

error: