ಮೈಸೂರು

ಗುರ್ ಮೆಹರ್ ಕೌರ್ ನ್ನು ದಾವೂದ್ ಗೆ ಹೋಲಿಸಿಲ್ಲ , ಅಪ್ರಬುದ್ಧತೆ ವಿಡಂಬನೆ ಮಾಡಿದ್ದೇನೆ : ಪ್ರತಾಪ್ ಸಿಂಹ ಸ್ಪಷ್ಟನೆ

ಹುತಾತ್ಮ ಸೈನಿಕನ ಪುತ್ರಿಯನ್ನು ಪಾತಕಿ ದಾವೂದ್ ಇಬ್ರಾಹಿಂಗೆ ಹೋಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದು,  ದೆಹಲಿ ವಿದ್ಯಾರ್ಥಿನಿ  ಗುರ್ ಮೆಹರ್ ಕೌರ್ ಅವರನ್ನು ನಾನು ದಾವೂದ್ ಗೆ  ಹೋಲಿಕೆ ಮಾಡಿಲ್ಲ. ಬದಲಿಗೆ ಅವರ ಅಪ್ರಬುದ್ಧತೆಯನ್ನು ಉದಾಹರಣಯೊಂದಿಗೆ ವಿಡಂಬನೆ ಮಾಡಿದ್ದೇನೆ ಎಂದಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ  ನಾನು ಮಾಡಿರುವ ಟ್ವಿಟ್ಟರ್ ರೀಪೋಸ್ಟ್ ಗೆ ನಾನು ಬದ್ಧನಾಗಿದ್ದೇನೆ. ಗುರ್ ಮೆಹರ್ ಕೌರ್ ಮತ್ತು ದೇಶಕ್ಕಾಗಿ ಪ್ರಾಣತೆತ್ತ ಅವರ ತಂದೆ ಬಗ್ಗೆ ನನಗೆ ಅಪಾರವಾಗಿ ಗೌರವವಿದೆ. ಆದರೆ ನನ್ನ ತಂದೆಯನ್ನು ಪಾಕಿಸ್ತಾನ ಸಾಯಿಸಲಿಲ್ಲ. ಯುದ್ಧ ಸಾಯಿಸಿತು ಎಂದರೆ ಅದರರ್ಥವೇನು, ವೈರಿಗಳಿಲ್ಲದೇ ಯುದ್ಧ ಹೇಗೆ ಸಾಧ್ಯ.  ಆಕೆಯ ಅಪ್ರಬುದ್ಧತೆಯನ್ನು ಒಪ್ಪಿಕೊಳ್ಳಲು ಹೇಗೆ ಸಾಧ್ಯ ಎಂದಿದ್ದಾರೆ.  ಆಕೆಯ ಪೋಸ್ಟ್ ಗೆ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸೇರಿದಂತೆ ಹಲವರು ತೀಕ್ಷ್ಣ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಅವುಗಳ ಪೈಕಿ ದಾವೂದ್ ಫೋಟೋ ಮತ್ತು ಹೇಳಿಕೆಯನ್ನು ಒಳಗೊಂಡ ಪೋಸ್ಟ್ ಕೂಡ  ಇತ್ತು. ಅದನ್ನು ನಾನು ರಿಪೋಸ್ಟ್ ಮಾಡಿದ್ದೇನೆ. ಇದರಲ್ಲಿ ತಪ್ಪೇನಿದೆ ಎಂದು ಸಮಜಾಯಿಷಿ ನೀಡಿದ್ದಾರೆ.

Leave a Reply

comments

Related Articles

error: