
ಪ್ರಮುಖ ಸುದ್ದಿ
ಮಳೆಯಿಂದ ಅವಾಂತರ : ಚಿತ್ರದುರ್ಗದಲ್ಲಿ ಗೋಡೆ ಕುಸಿದು ವೃದ್ಧೆ ಸಾವು
ರಾಜ್ಯ(ಚಿತ್ರದುರ್ಗ)ಅ.23:- ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಅವಾಂತರ ಸೃಷ್ಟಿಸಿದ್ದು ಈ ನಡುವೆ ಮಳೆಯಿಂದಾಗಿ ಮನೆ ಗೋಡೆ ಕುಸಿದು ವೃದ್ದೆ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಶ್ರೀರಾಂಪುರದಲ್ಲಿ ಈ ಘಟನೆ ನಡೆದಿದೆ. ವೃದ್ಧೆ ಬುಡನ್ ಬಿ(80) ಮೃತಪಟ್ಟವರು. ಚಿತ್ರದುರ್ಗ ಜಿಲ್ಲೆಯಾದ್ಯಾಂತ ಭಾರೀ ಮಳೆಯಾಗುತ್ತಿದೆ. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗೋಡೆ ಕುಸಿದು ವೃದ್ದೆ ಮೃತಪಟ್ಟಿದ್ದಾರೆ.
ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. (ಕೆ.ಎಸ್,ಎಸ್.ಎ