ಮೈಸೂರು

ಯುವಜನತೆ ಶುದ್ಧ ಜೀವನ ನಡೆಸಲು ಸಚಿವ ಯು.ಟಿ.ಖಾದರ್ ಸಲಹೆ

ನೆಮ್ಮದಿ ಜೀವನದೆಡೆಗೆ ಯುವ ಜನತೆ ಹೋಗಬೇಕಿದ್ದು, ಒತ್ತಡ ಜೀವನದಿಂದ ಮುಕ್ತಿ ಪಡೆದು ಆಧ್ಯಾತ್ಮಿಕತೆಯೆಡೆಗೆ ನಿಮ್ಮನ್ನು ತೊಡಗಿಸಿಕೊಂಡು ಶುದ್ಧಜೀವನ ನಡೆಸಬೇಕಿದೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಹಾಗೂ ಆಹಾರ ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಸಲಹೆ ನೀಡಿದರು.

ಮೈಸೂರು ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ವಿಶ್ವಮಾನವ ಮೈಸೂರು ವಿವಿ ನೌಕರರ ವೇದಿಕೆ ಕುವೆಂಪು ಜಯಂತ್ಯೋತ್ಸವ ಹಾಗೂ ನಿವೃತ್ತ ವಿವಿ ನೌಕರರಿಗೆ ಸನ್ಮಾನ ಮತ್ತು ಸಿಂಡಿಕೇಟ್ ಸದಸ್ಯರುಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ಯುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಆಧುನಿಕತೆಯ ಫೇಸ್ ಬುಕ್ ವಾಟ್ಸಾಪ್ ಯುಗದಲ್ಲಿ ಒಬ್ಬರ ಮೇಲೆ ಒಬ್ಬರು ನಂಬಿಕೆ, ವಿಶ್ವಾಸಗಳನ್ನೇ ಕಳೆದುಕೊಂಡು ಸಂಶಯದಿಂದಲೇ ನೋಡುವಂತಾಗಿದೆ. ಇಂತಹ ಕಾಲದಲ್ಲಿ ಕುವೆಂಪು ಅವರ ತತ್ವ ಮತ್ತು ಆದರ್ಶಗಳನ್ನು ಯುವಜನತೆ ರೂಢಿಸಿಕೊಳ್ಳಬೇಕಿದೆ ಎಂದರು. ನೆಮ್ಮದಿಯ ಬದುಕು, ನೆಮ್ಮದಿಯ ಜೀವನ ನಡೆಸುವ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಸಮಸ್ಯೆ ಕಷ್ಟಗಳಿಲ್ಲದ ಜೀವನವಿಲ್ಲ. ಅದಕ್ಕಾಗಿ ಆಧ್ಯಾತ್ಮಿಕ ಜೀವನ ರೂಢಿಸಿಕೊಳ್ಳಬೇಕು. ಮಾನವೀಯತೆಯ ಗುಣ, ಸಮಾಧಾನಗಳನ್ನು ಬೆಳೆಸಿಕೊಳ್ಳಬೇಕು. ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುವ ಕೆಲಸವನ್ನು ಮಾಡಬಾರದು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭ ಉಪಪೊಲೀಸ್ ಆಯುಕ್ತ ಡಾ.ಹೆಚ್.ಟಿ.ಶೇಖರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಪತ್ರಕರ್ತ  ಅಂಶಿಪ್ರಸನ್ನಕುಮಾರ್, ಮೈಸೂರು ವಿವಿ ಗಣಕ ವಿಜ್ಞಾನ ವಿಭಾಗದ  ಪ್ರೊ.ಹೇಮಂತ್ ಕುಮಾರ್, ವಿವಿ ಉಪಕುಲಸಚಿವ ಎಂ.ವಿ.ವಿಷಕಂಠ, ಪರೀಕ್ಷಾ ವಿಭಾಗ ಹರೀಶ್ ಬಾಬು ಅವರನ್ನು ಸನ್ಮಾನಿಸಲಾಯಿತು.

ಸಿಂಡಿಕೇಟ್ ಸದಸ್ಯ ನಾರಾಯಣಪ್ರಸಾದ್, ಅರುಣ್ ಕುಮಾರ್ ಅವರನ್ನು ಬೀಳ್ಕೊಡಲಾಯಿತು.

ವೇದಿಕೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ, ಪ್ರೊ.ಎಸ್.ಶಿವರಾಜಪ್ಪ, ಎಸ್.ಮಾದೇಗೌಡ, ಎಂ.ಬಿ.ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

 

Leave a Reply

comments

Related Articles

error: