ಪ್ರಮುಖ ಸುದ್ದಿಮೈಸೂರು

ಸ್ಥಳೀಯ ವ್ಯಾಪಾರಿಗಳಿಗೆ ಉಪಯುಕ್ತವಾಗುವ ‘ಈಜಿಹಂಟ್’ ಮೊಬೈಲ್ ಆಪ್ : ಬಳಲು ಕರೆ

ಮೈಸೂರು.ಅ.23 : ನಗರದ ಸುತ್ತಮುತ್ತಲಿನ ವ್ಯಾಪಾರಿಗಳ, ಕರಕುಶಲಕರ್ಮಿಗಳ, ಇತರೆ ಕಾರ್ಮಿಕರ ಸಮಗ್ರ ಮಾಹಿತಿಯಿರುವ ಮೊಬೈಲ್ ಆಪ್ ‘ಈಜಿಹಂಟ್’ ಅನ್ನು ತಯಾರಿಸಲಾಗಿದ್ದು, ಇದರಲ್ಲಿ ಸ್ಥಳೀಯ ಕಾರ್ಮಿಕರ ಇತರ ಉದ್ಯೋಗಿಗಳ ಬಗ್ಗೆ ವಿವರವನ್ನು ನೀಡಲಾಗಿದೆ ಎಂದು ಈಜಿಹಂಟ್ ಸಾಫ್ಟ್ ಟೆಕ್  ನಿರ್ದೇಶಕ ವೆಂಕಟೇಶಮೂರ್ತಿ ತಿಳಿಸಿದರು.

ಪ್ಲೇ ಸ್ಟೋರ್ ನಲ್ಲಿ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದ್ದು, ಇದರಲ್ಲಿ ರಕ್ತದಾನಿಗಳು, ಬ್ಲಡ್ ಬ್ಯಾಂಕ್, ಡಯಾಲಿಸಿಸ್ ಸೆಂಟರ್, ಹತ್ತಿರದ ಸರ್ಕಾರಿ ಆಸ್ಪತ್ರೆ, ಪೊಲೀಸ್ ಠಾಣೆ, ಅಗ್ನಿಶಾಮಕ ಠಾಣೆ ಹಾಗೂ ರೈತರ ಅಗತ್ಯ ಮಾಹಿತಿ, ಸರ್ಕಾರಿ, ಸರ್ಕಾರೇತರ ಸಂಸ್ಥೆಗಳ ಅವಶ್ಯ ವಿವರಗಳು ಲಭ್ಯವಿರಲಿದೆ ಎಂದರು.

ಪ್ಲೇ ಸ್ಟೋರ್ ನಲ್ಲಿ eazyhunt ಎಂದು ಟೈಪ್ ಮಾಡಿ ಡೌನ್ ಲೋಡ್ ಮಾಡಿಕೊಂಡು ತಮ್ಮ ಹೆಸರನ್ನು ಇದರಲ್ಲಿ ನೊಂದಾಯಿಸಿಕೊಳ್ಳಬಹುದೆಂದು ತಿಳಿಸಿದರು.

ಸಂಸ್ಥೆಯ ಎಂ.ಎಸ್.ರಾಜಶೇಖರ ಮೂರ್ತಿ, ಕೆ.ಎನ್.ಸತೀಶ್, ಬೋಜರಾಜ್, ಪಾರ್ಥ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: