ಕ್ರೀಡೆಪ್ರಮುಖ ಸುದ್ದಿ

ಜಿಲ್ಲಾ ಮಟ್ಟದ ಟೇಬಲ್ ಟಿನ್ನಿಸ್ ಪಂದ್ಯಾವಳಿಯ ಸಮಾರೋಪ ಸಮಾರಂಭ

ರಾಜ್ಯ( ಮಡಿಕೇರಿ) ಅ.24 :- ಕೂರ್ಗ್ ಟೇಬಲ್ ಟೆನ್ನಿಸ್ ಅಶೋಸಿಯೇಷನ್ ಮತ್ತು ರೋಟರಿ ಕ್ಲಬ್ ವತಿಯಿಂದ ಮೂರು ದಿನಗಳ ಕಾಲ ನಡೆದ 5ನೇ ವರ್ಷದ ಜಿಲ್ಲಾ ಮಟ್ಟದ ಟೇಬಲ್ ಟಿನ್ನಿಸ್ ಪಂದ್ಯಾವಳಿಯ ಸಮಾರೋಪ ಸಮಾರಂಭ ಕಾರ್ಯಕ್ರಮವು ನಗರದ ರೋಟರಿ ಸಭಾಂಗಣದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಏ ಟೂ ಜೇಡ್ ಸೂಪರ್ ಮಾರ್ಕೇಟ್‍ನ ಮಾಲೀಕರಾದ ಮೊಹಮ್ಮದ್ ನಾಸೀರ್, ಮುಳಿಯ ಜ್ಯುವೆಲ್ಲರ್ಸ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಕೇಶವ ಪ್ರಸಾದ್ ಮಾತನಾಡಿ, ಕ್ರೀಡೆಯ ಮಹತ್ವವನ್ನು ತಿಳಿಸಿದರು.
ಮೈಸೂರಿನ ಡಾ.ಎಂ.ಜಿ.ಪಾಲ್ಕಾರ್, ರೋಟರಿ ಕಾರ್ಯದರ್ಶಿ ಕೆ.ಸಿ. ಕಾರ್ಯಪ್ಪ, ಕೂರ್ಗ್ ಟೇಬಲ್ ಟೆನ್ನಿಸ್ ಅಸೋಸಿಯೇಶನ್ ಅಧ್ಯಕ್ಷರಾದ ಮೊಹಮ್ಮದ್ ಆಸೀಫ್ ಇತರರು ಇದ್ದರು.
ಸ್ಪರ್ಧೆಯಲ್ಲಿ ವಿಜೇತರಾದ ವಿವರ : ಜೂನಿಯರ್ ವಿಭಾಗದಲ್ಲಿ 14 ವರ್ಷದೊಳಗಿನ ಹುಡುಗರು ಸಹದ್(ಪ್ರಥಮ), ಪ್ರಥ್ವಿನ್(ದ್ವಿತೀಯ), ಜೂನಿಯರ್ ವಿಭಾಗದಲ್ಲಿಎ 14 ವರ್ಷದೊಳಗಿನ ಹುಡುಗಿಯರು ತನ್ವಿಕ(ಪ್ರಥಮ), ಲಕ್ಷ್ಮಿ(ದ್ವಿತೀಯ).
ಜೂನಿಯರ್ ಡಬಲ್ಸ್ ವಿಭಾಗದಲ್ಲಿ 21 ವರ್ಷದೊಳಗಿನ ಹುಡುಗಿಯರಿಗೆ ಅನುಷ(ಪ್ರಥಮ), ಪೂವಮ್ಮ(ಪ್ರಥಮ) ಪೂರ್ವಿ(ದ್ವಿತೀಯ) ತನ್ವಿಕ(ದ್ವಿತೀಯ). ಜೂನಿಯರ್ ಹುಡುಗರ ಡಬಲ್ಸ್ ವಿಭಾಗದಲ್ಲಿ ಬಿದಪ್ಪ(ಪ್ರಥಮ), ಚೇತನ್(ಪ್ರಥಮ), ಪ್ರಥ್ವೇನ್(ದ್ವಿತೀಯ), ಜಶ್ವಂತ್(ದ್ವಿತೀಯ).
ಜೂನಿಯರ್ ಹುಡುಗಿಯರ ವಿಭಾಗದಲ್ಲಿ ಪೂವಮ್ಮ(ಪ್ರಥಮ), ಅನುಷ(ದ್ವಿತೀಯ), ಜೂನಿಯರ್ ಹುಡುಗರ ವಿಭಾಗದಲ್ಲಿ ಪ್ರಜ್ವಲ್(ಪ್ರಥಮ) ಹಾಗೂ ಚೇತನ್(ದ್ವಿತೀಯ)
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ರೀನಾ(ಪ್ರಥಮ) ಹಾಗೂ ರೋನಿಶ ಜಾನ್(ದ್ವಿತೀಯ), ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ರೋನಿಶ ಜಾನ್ ಹಾಗೂ ರೀನಾ(ಪ್ರಥಮ), ಕವಿತ ಸತ್ಯದೇವ, ಶಾಂತಿ ದೇವದಾಸ್(ದ್ವಿತೀಯ).
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮಂಜುನಾಥ್ ಪಿ.ಎಲ್.(ಪ್ರಥಮ), ಆಕಾಶ್(ದ್ವಿತೀಯ). ಪುರುಷರ ಡಬಲ್ಸ್ ವಿಭಾಗದಲ್ಲಿ ಮಂಜುನಾಥ್ ಪಿ.ಎಲ್ ಹಾಗೂ ರಾಮ್‍ದೇವ್(ಪ್ರಥಮ). ಮಲ್ಲೇಂಗಡ ರಚನ್ ಪೊನ್ನಪ್ಪ ಹಾಗೂ ರಶೀದ್(ದ್ವಿತೀಯ).
ಮಿಶ್ರ ವಿಭಾಗದಲ್ಲಿ ಮಂಜುನಾಥ್ ಪಿ.ಎಲ್ ಹಾಗೂ ರೀನಾ(ಪ್ರಥಮ), ನಮಿತ ಹಾಗೂ ಮಲ್ಲೇಂಗಡ ರಚನ್ ಪೊನ್ನಪ್ಪ (ದ್ವಿತೀಯ). ವಯಸ್ಕರ ವಿಭಾಗದಲ್ಲಿ ರಾಮದೇವ(ಪ್ರಥಮ) ಹಾಗೂ ಅನೀಸ್ ಮೊಹಮ್ಮದ್(ದ್ವಿತೀಯ)
ಈ ಸಂದರ್ಭದಲ್ಲಿ ನಿವೃತ ಶಿಕ್ಷಕಿ ಕಸ್ತೂರಿ ಗೋವಿಂದಮ್ಮಯ್ಯ, ನಿವೃತ ದೈಹಿಕ ಶಿಕ್ಷಕರಾದ ಲಕ್ಷ್ಮಣ್ ಸಿಂಗ್ ಹಾಗೂ ತೀರ್ಪುಗಾರರಾದ ಆಕಾಶ್ ಮತ್ತು ವಿಲ್ಸರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ನಿರ್ವಹಣೆಯನ್ನು ಗೀತಾ ಗಿರೀಶ್ ಮತ್ತು ಕೆ.ಸಿ.ಕಾರ್ಯಪ್ಪ ಅವರು ನಡೆಸಿಕೊಟ್ಟರು. ಆಯಿಷಾ ಆಸೀಪ್ ಸರ್ವರನ್ನು ವಂದಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: