ಮೈಸೂರು

ಮರುಮದುವೆಗೆ ಪೋಷಕರ ನಿರಾಕರಣೆ : ಮಹಿಳೆ ನೇಣಿಗೆ ಶರಣು

ಮರು ಮದುವೆಗೆ ಪೋಷಕರು ಸಮ್ಮತಿ ನೀಡದ ಹಿನ್ನೆಲೆಯಲ್ಲಿ ಮಹಿಳೆಯೋರ್ವರು ಮನನೊಂದು ನೇಣಿಗೆ ಶರಣಾದ  ಘಟನೆ ಮೈಸೂರಿನಲ್ಲಿ ನಡೆದಿದೆ.
ಮೃತಳನ್ನು ನಾಯ್ಡುನಗರ ನಿವಾಸಿ ಮೆಲಿನಾ(26) ಎಂದು ಗುರುತಿಸಲಾಗಿದೆ.  ಮೆಲಿನಾ ವಿವಾಹದ ನಂತರ ಪತಿಯನ್ನು  ಕಳೆದುಕೊಂಡು ತವರು ಮನೆಯಲ್ಲಿ ವಾಸವಿದ್ದು, ಇತ್ತೀಚೆಗೆ ಎನ್.ಆರ್.ಮೊಹಲ್ಲಾದ 21 ವರ್ಷದ ರೋಶನ್ ಎಂಬಾತನ‌ ಮೇಲೆ ಪ್ರೀತಿ ಅಂಕುರಿಸಿತ್ತು ಎನ್ನಲಾಗಿದೆ. ಮನೆಯಲ್ಲಿ ರೋಶನ್ ಜೊತೆ ವಿವಾಹ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದಳು. ಆದರೆ ಆಕೆಗಿಂತ ಆತ ವಯಸ್ಸಿನಲ್ಲಿ ಚಿಕ್ಕವನಾದ್ದರಿಂದ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದರು. ಇದರಿಂದ ಬೇಸರಗೊಂಡ ಮೆಲಿನಾ ನೇಣಿಗೆ ಶರಣಾಗಿದ್ದಾಳೆ.

ಆಕೆಯ ತಾಯಿ ಮೇರಿ ಎನ್.ಆರ್. ಠಾಣೆಯಲ್ಲಿ  ದೂರು ದಾಖಲಿಸಿದ್ದಾರೆ. ಸಾಯುವ ಮುನ್ನ ಆಕೆ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ   ಮಮತಾ, ಲಿಲ್ಲಿ, ಪಪ್ಪಿ, ಮಲ್ಲಿಕಾ ಮತ್ತು ಇರ್ದುರಾಜ್ ಎಂಬವರ ಹೆಸರನ್ನು ನಮೂದಿಸಿದ್ದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಪ್ರಿಯಕರ  ರೋಶನ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

Leave a Reply

comments

Related Articles

error: