ಕರ್ನಾಟಕಪ್ರಮುಖ ಸುದ್ದಿಮೈಸೂರು

ಬಿಬಿಎಂಪಿ ಮೇಯರ್ ಚುನಾವಣೆ – ಕಾವೇರಿ ವಿವಾದಕ್ಕೆ ಸಂಬಂಧವಿಲ್ಲ: ದೇವೇಗೌಡ

ರಾಜ್ಯವನ್ನು ಬಾಧಿಸುತ್ತಿರುವ ಕಾವೇರಿ ಜಲವಿವಾದಕ್ಕೂ ಬಿಬಿಎಂಪಿ ಮೇಯರ್ ಚುನಾವಣೆಗೂ ಸಂಬಂಧ ಬೆಸೆಯಲು ಪ್ರಯತ್ನಿಸಬಾರದು ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದ್ದಾರೆ.

ಭಾನುವಾರ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಅವರು, ಬಿಬಿಎಂಪಿ ಮೇಯರ್ ಚುನಾವಣೆಯ ಮೈತ್ರಿಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಮಾತನಾಡುತ್ತಾರೆ. ಈ ಬಗ್ಗೆ ನಾನೇನೂ ಮಾತನಾಡುವುದಿಲ್ಲ ಎಂದರು.

ಮೋದಿ ಮಧ್ಯ ಪ್ರವೇಶಿಸಲಿ:

ಕಾವೇರಿ ಜಲವಿವಾದದಲ್ಲಿ ಪ್ರಧಾನಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎನ್ನುವ ಬಿಜೆಪಿಯವರ ನಿಲುವು ದುರದೃಷ್ಟಕರ. ಅಂತಾರಾಜ್ಯ ವಿವಾದವಾಗಿರುವ ಕಾರಣ ದೇಶದ ಸಂಸತ್ತಿಗೆ ಮಧ್ಯಪ್ರವೇಶಿಸುವ ಅಧಿಕಾರವಿದೆ. ಲೋಕಸಭೆಯಲ್ಲಿ ಬಹುಮತದ ಪಡೆದು ಸರ್ಕಾರ ನಡೆಸುತ್ತಿರುವ ಬಿಜೆಪಿಯ ಮೇಲೆ ಸಂರ್ಪೂರ್ಣ ಹೊಣೆಗಾರಿಕೆ ಇದೆ. ರಾಜ್ಯದ ಬಿಜೆಪಿ ನಾಯಕರು ಹೊಣೆಗಾರಿಕೆಯಿಂದ ನುಣುಚಿಕೊಳ್ಳಬಾರದು. ಇದು ಹೀಗೇ ಮುಂದುವರಿದರೆ ಎಂತಹದೇ ಹೋರಾಟಕ್ಕೂ ನಾನು ಸಿದ್ಧ. ನಾನು ಯಾರಿಗೂ ಹೆದರುವ ಅವಶ್ಯಕತೆಯಿಲ್ಲ ಎಂದು ಇದೇ ಸಂದರ್ಭ ದೇವೇಗೌಡರು ಗುಡುಗಿದರು.

ನ್ಯಾಯಾಂಗ ನಿಂದನೆಯಾಗುವುದಿಲ್ಲ:

ನೀರು ಬಿಡುಗಡೆ ಸಾಧ್ಯವಿಲ್ಲವೆಂದು ವಿಧಾನಮಂಡಲ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದೆ. ರಾಜ್ಯದ ಜನರಿಗೆ ಕುಡಿಯಲೂ ಸಹ ನೀರಿಲ್ಲ. ಇಂತಹ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಬೆಳೆ ಬೆಳೆಯಲು ನೀರು ಬಿಡುಗಡೆ ಹೇಗೆ ಸಾಧ್ಯ? ಮಳೆ ಕಡಿಮೆ ಇರುವ ಕಾರಣದಿಂದ ನೀರು ನಿಲ್ಲಿಸಲಾಗಿದೆ. ಆದ್ದರಿಂದ ಇಲ್ಲಿ ನ್ಯಾಯಾಂಗ ನಿಂದನೆ ಪ್ರಶ್ನೆ ಬರುವುದಿಲ್ಲ ಎಂದರು.

ಜೆಡಿಎಸ್ ಮೈತ್ರಿಯಿಂದ ಹಿಂದೆ ಸರಿದ ಬಿಜೆಪಿ:

ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾವವನ್ನು ಬಿಜೆಪಿ ಕೈಬಿಟ್ಟಿದೆ ಎಂದು ವರದಿಯಾಗಿದ್ದು, ಮುಂಬರುವ ದಿನಗಳಲ್ಲಿ ಮಳೆಯಾಗದಿದ್ದರೆ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಕೊರತೆ ತಲೆದೋರಲಿದೆ. ಈ ಬಿಕ್ಕಟ್ಟಿನ ಸಂದರ್ಭದಿಂದ ಪಾರಾಗಲು ಬಿಜೆಪಿ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ.

Leave a Reply

comments

Tags

Related Articles

error: