
ಮೈಸೂರು, ಅ.24:- ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು 2019-20 ಸಾಲಿನಲ್ಲಿ ಆಯೋಜಿಸಿದ್ದ ಫ್ರೌಢಶಾಲಾ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
10ನೇ ತರಗತಿಯ ವಿದ್ಯಾರ್ಥಿನಿ ದರ್ಶಿನಿ ಸಿ.ಎಸ್. ಜಾವಲಿನ್ ಎಸೆತದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. 10ನೇ ತರಗತಿ ವಿದ್ಯಾರ್ಥಿನಿಯರಾದ ಭಾವನ ಆರ್. ಮತ್ತು ದರ್ಶಿನಿ ಸಿ.ಎಸ್. 5ನೇ ಇಂಡಿಯನ್ ಸ್ಕೂಲ್ ಸ್ಪೋರ್ಟ್ಸ್ ನ್ಯಾಷನಲ್ ಗೇಮ್ಸ್ನ ಕಬ್ಬಡಿ ಆಟದಲ್ಲಿ ಭಾಗವಹಿಸಿ ಗೋವಾದಲ್ಲಿ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ಭಾರತ ತಂಡಕ್ಕೆ ಇಂಡಿಯನ್ ಸ್ಕೂಲ್ ಸ್ಪೋರ್ಟ್ಸ್ ನ್ಯಾಷನಲ್ ಗೇಮ್ಸ್ನ ಸಂಸ್ಥೆಯಿಂದ ಆಯ್ಕೆಯಾಗಿರುತ್ತಾರೆ. ಈ ವಿದ್ಯಾರ್ಥಿನಿಯರನ್ನು ಗಂಗೋತ್ರಿ ಪಬ್ಲಿಕ್ ಶಾಲೆಯ ಅಧ್ಯಕ್ಷ ಟಿ.ರಂಗಪ್ಪ, ಶಿಕ್ಷಕ/ಶಿಕ್ಷಕಿಯರು ಹಾಗೂ ಆಡಳಿತ ಮಂಡಳಿಯವರು ಶುಭ ಹಾರೈಸಿದ್ದಾರೆ. (ಜಿ.ಕೆ,ಎಸ್.ಎಚ್)