ಕರ್ನಾಟಕಮನರಂಜನೆ

ಯಶ್ ಅಭಿಮಾನಿಗಳಿಂದ ಕಿರುಕುಳ: ಯಶ್, ರಾಧಿಕಾ ಮೊರೆ ಹೋದ ನಟಿ ಸಂಗೀತಾ ಭಟ್

ಬೆಂಗಳೂರು,ಅ.24-ನಟಿ ಸಂಗೀತಾ ಭಟ್ ಅವರ ಪತಿ ಸುದರ್ಶನ್ ರಂಗಪ್ರಸಾದ್ ಅವರು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಮಾಡಿದ್ದರು. ಸುದರ್ಶನ್ ಮತ್ತು ಅವರ ಪತ್ನಿ ಸಂಗೀತಾ ಭಟ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಅಸಭ್ಯ, ಅಶ್ಲೀಲ ಪದ ಬಳಸಿ ಕಾಮೆಂಟ್ ಮಾಡುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಸಂಗೀತಾ ಭಟ್, ನಾನು ಸಾಧಾರಣವಾಗಿ ಈ ರೀತಿ ವಿಷಯಗಳನ್ನು ಕುರಿತು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಇದು ಮಿತಿ ಮೀರುತ್ತಿದೆ. ಈ ಪೋಸ್ಟ್ ಗಳು ನಿಮಗೆ ಹೇಳುತ್ತದೆ. ನಾನು ಹೆಚ್ಚು ಏನು ಹೇಳಲು ಇಚ್ಛಿಸುವುದಿಲ್ಲ. ಇದು ಯಶ್ ಅವರು ನೋಡಿ ಇನ್ನೂ ಇದರ ಬಗ್ಗೆ ಸುಮ್ಮನಿರಬೇಕು ಅಥವಾ ಅವರನ್ನು ಹುಚ್ಚಾಗಿ ಮೆಚ್ಚುವ ಅಭಿಮಾನಿಗಳಿಗೆ ಬುದ್ಧಿವಾದ ಹೇಳಬೇಕಾ ಯೋಚಿಸಲಿ ಎಂದು ಸಂಗೀತಾ ಭಟ್ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

ಅಲ್ಲದೆ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಈ ಪೋಸ್ಟ್ ಅನ್ನು ಅವರಿಗೂ ಟ್ಯಾಗ್ ಮಾಡಿ, ವಿಷಯ ತಲುಪುವ ಹಾಗೆ ಮಾಡಿದ್ದಾರೆ. ಯಶ್, ರಾಧಿಕಾ ಇದರ ಬಗ್ಗೆ ಏನಾದರೂ ಪ್ರತಿಕ್ರಿಯೆ ನೀಡುತ್ತಾರೆಯೇ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಎರಡು ವರ್ಷದ ಹಿಂದೆ ಒಂದು ಸ್ಟಾಂಡ್ ಅಪ್ ಕಾಮಿಡಿ ಕಾರ್ಯಕ್ರಮದಲ್ಲಿ ನಟ ಯಶ್ ಡೈಲಾಗ್ ಅನ್ನು ಸುದರ್ಶನ್ ರಂಗಪ್ರಸಾದ್ ಇಮಿಟೇಟ್ ಮಾಡಿದ್ದರು. ‘ಬಿಲ್ಡಪ್ ಡೈಲಾಗ್’ ಎಂಬ ಪದವನ್ನು ಯಶ್ ಗೆ ಬಳಕೆ ಮಾಡಿದ್ದರು. ಈ ಕುರಿತಾಗಿ ಕ್ಷಮೆಯನ್ನೂ ಕೇಳಿದ್ದರು. ಆದರೆ, ಕೆಲವೊಂದು ಕಿಡಿಗೇಡಿಗಳು ಇದನ್ನೆ ಅಸ್ತ್ರವಾಗಿ ಬಳಸಿಕೊಂಡು ನಟಿ ಸಂಗೀತ ಭಟ್ ಗೆ ಹಿಂಸೆ ನೀಡುತ್ತಿದ್ದಾರೆ.

ಈ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ 4,69,000 ಮಂದಿ ವೀಕ್ಷಿಸಿದ್ದಾರೆ. ಅಲ್ಲಿ ಲೂಸ್‌ಮಾದ ಯೋಗಿಯ ಹೆಸರನ್ನು ಕೂಡ ಬಳಸಲಾಗಿತ್ತು. ಸುದರ್ಶನ್ ಅವರ ‘ಲೋಲ್‌ಬಾಗ್‌’ ಎನ್ನುವ ಸ್ಟ್ಯಾಂಡಪ್‌ ಕಾಮಿಡಿ ಇದೆ. ಈ ಮೂಲಕ ಅವರು ವಿಧ ವಿಧದಲ್ಲಿ ವಿವಿಧ ವೇದಿಕೆಗಳಲ್ಲಿ ಕಾರ್ಯಕ್ರಮ ಕೊಡುತ್ತಾರೆ. ಲೋಲ್‌ಬಾಗ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ 99000 ಮಂದಿ ಫಾಲೋವರ್ಸ್ ಇದ್ದಾರೆ.

‘ಪ್ರೀತಿ ಗೀತಿ ಇತ್ಯಾದಿ’ ಸಿನಿಮಾದಲ್ಲಿ ಸಂಗೀತಾ ಭಟ್ ಮತ್ತು ಸುದರ್ಶನ್ ಒಟ್ಟಿಗೆ ನಟಿಸಿದ್ದರು. ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದರು. (ಎಂ.ಎನ್)

Leave a Reply

comments

Related Articles

error: