ಮೈಸೂರು

ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರಾ ಸಿ.ಹೆಚ್.ವಿಜಯಶಂಕರ್ ?

ಮೈಸೂರು, ಅ.24:-  ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿದ್ದ ಮುಖಂಡ ಸಿ.ಎಚ್​. ವಿಜಯಶಂಕರ್​ ಮತ್ತೆ ತವರು ಪಕ್ಷಕ್ಕೆ ಮರಳಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಸಿ.ಎಚ್​.ವಿಜಯಶಂಕರ್​ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು.  ಅವರು ಅದಕ್ಕೂ  ಮೊದಲು ಕಾಂಗ್ರೆಸ್​ನಲ್ಲೇ ಇದ್ದವರು.  ನಂತರ  ಬಿಜೆಪಿಗೆ ಸೇರ್ಪಡೆಯಾಗಿದ್ದರು.   ಕಳೆದ ಫೆಬ್ರವರಿಯಲ್ಲಿ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ಕಾಂಗ್ರೆಸ್​ಗೆ ಸೇರ್ಪಡೆಗೊಂಡಿದ್ದು, ಸಿದ್ದರಾಮಯ್ಯನವರ ಆಪ್ತವಲಯದಲ್ಲಿ  ಗುರುತಿಸಿಕೊಂಡಿದ್ದರು. ಈಗ ಮತ್ತೆ ಬಿಜೆಪಿ ಸೇರಲು ತೀರ್ಮಾನಿಸಿದ್ದಾರೆ ಎನ್ನಲಾಗಿದ್ದು,  ಬಿಜೆಪಿಗೆ ಮರಳುವುದನ್ನು ಮುಖ್ಯಮಂತ್ರಿ ಯಡಿಯೂರಪ್ಪನವರೂ ಕೂಡ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ವಿಜಯಶಂಕರ್​ ಅವರು ಪಿರಿಯಾಪಟ್ಟಣದ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೇಟ್​ ಕೇಳಿದ್ದಾರೆ ಎನ್ನಲಾಗಿದ್ದು, ಅದಕ್ಕೆ ಬಿಜೆಪಿ ನಾಯಕರೂ ಸಮ್ಮತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಮಾಧ್ಯಮಗಳಿಗೆ ಮೈಸೂರಿನಲ್ಲಿಂದು ಪ್ರತಿಕ್ರಿಯಿಸಿರುವ  ಸಚಿವ ವಿ.ಸೋಮಣ್ಣ, ವಿಜಯಶಂಕರ್​ ನನ್ನ ಆತ್ಮೀಯ ಸ್ನೇಹಿತ. ನಾನು ವಿಜಯಶಂಕರ್​ಗೆ ಮೊದಲೇ ಹೇಳಿದ್ದೆ. ಮೋದಿ ಹವಾ ಇದೆ, ತರಗೆಲೆ ತರ ತೂರಿ ಹೋಗುತ್ತೀರಿ ಅಂತ. ಅವರ ಮನೆಯವರ ಬಳಿಯೂ ಮಾತುಕತೆ ಆಡಿದ್ದೆ. ಆದರೂ ಪಕ್ಷ ತೊರೆದುಹೋಗಿದ್ದರು ಎಂದಿದ್ದಾರೆ. ವಿಜಯಶಂಕರ್​ ಮರಳಿ ಪಕ್ಷಕ್ಕೆ ಬರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅದನ್ನು ವರಿಷ್ಠರು ​ ನಿರ್ಧರಿಸುತ್ತಾರೆ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: