ಸುದ್ದಿ ಸಂಕ್ಷಿಪ್ತ

ನ.1ರಂದು ಚಿತ್ರಕಲಾ ಸ್ಪರ್ಧೆ

ಮೈಸೂರು.ಅ.24 : ಚೌಡೇಶ್ವರಿ ಶಾಂತಿನಿಕೇತನ ಟ್ರಸ್ಟ್ ನಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ 5ನೇ ವರ್ಷದ ಚಿತ್ರಕಲಾ ಸ್ಪರ್ಧೆಯನ್ನು ನ.1ರ ಬೆಳಗ್ಗೆ 10 ಗಂಟೆಗೆ ಕುವೆಂಪುನಗರದ ಗಂಡುಭೇರುಂಡ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿದೆ.

ಮಹಾನಗರ ಪಾಲಿಕೆ ಸದಸ್ಯ ಎಂ.ಸಿ.ರಮೇಶ್ ಉದ್ಘಾಟಿಸುವರು. ಆರ್.ಎಸ್.ಎಸ್ ನ ರಾಮಕೃಷ್ಣಯ್ಯ, ಪಾಲಿಕೆ ಸದಸ್ಯೆ ಶೋಭಾ ಸುನಿಲ್ ಹಾಜರಿರಲಿದ್ದಾರೆ. ಚಿತ್ರಕಲಾ ಉಪನ್ಯಾಸಕ ಎಂ.ಆರ್.ಮನೋಹರ್ ತೀರ್ಪುಗಾರರಾಗಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: