ಪ್ರಮುಖ ಸುದ್ದಿ

ಜಿಲ್ಲಾ ಫುಟ್ಬಾಲ್ ತಂಡಕ್ಕೆ ಅ.26 ರಂದು ಆಯ್ಕೆ ಪ್ರಕ್ರಿಯೆ

ರಾಜ್ಯ( ಮಡಿಕೇರಿ) ಅ.25 :- ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಒಲಿಂಪಿಕ್ ಕ್ರೀಡಾಕೂಟಕ್ಕೆ ಕೊಡಗು ಜಿಲ್ಲಾ ಫುಟ್ಬಾಲ್ ತಂಡದ ಆಯ್ಕೆ ಪ್ರಕ್ರಿಯೆ ಅ. 26 ರಂದು ಗುಡ್ಡೆಹೊಸೂರಿನ ಐಎನ್‍ಎಸ್ ಕ್ರೀಡಾ ಕೇಂದ್ರದ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಲಿದೆ.
ನ. 23 ರಿಂದ 30 ರವರೆಗೆ ಶಿವಮೊಗ್ಗದಲ್ಲಿ ರಾಜ್ಯ ಒಲಿಂಪಿಕ್ ಕ್ರೀಡಾಕೂಟ ನಡೆಯಲಿದ್ದು, ಜಿಲ್ಲಾ ಫುಟ್ಬಾಲ್ ಸಂಸ್ಥೆಯೊಂದಿಗೆ ನೋಂದಾಯಿಸಿಕೊಂಡಿರುವ ತಂಡಗಳ ಆಟಗಾರರು ಮಾತ್ರ ಈ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಒಟ್ಟು 16 ಮಂದಿ ಆಟಗಾರರ ಆಯ್ಕೆ ನಡೆಯಲಿದ್ದು, ಇದರಲ್ಲಿ 21 ವರ್ಷದೊಳಗಿನ ಇಬ್ಬರಿಗೆ (01.01.1999 ನಂತರ ಜನಿಸಿದವರು) ಮತ್ತು 17 ವರ್ಷದೊಳಗಿನ (01-01-2003 ರಿಂದ 31.12.2004ರ ಒಳಗೆ ಜನಿಸಿದವರು) ಇಬ್ಬರು ಆಟಗಾರಿಗೆ ಅವಕಾಶ ಕಲ್ಪಿಸಲಾಗಿದೆ.
ತಂಡಕ್ಕೆ ಆಯ್ಕೆಯಾಗುವ ಆಟಗಾರರಿಗೆ ಪ್ರಯಾಣ ಮತ್ತು ಊಟದ ಭತ್ಯೆಯನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಪಾವತಿಸಲಾಗುತ್ತದೆ. ಹಾಗಾಗಿ ಆಯ್ಕೆಯಾಗುವ ಆಟಗಾರರು ಬ್ಯಾಂಕ್ ಖಾತೆ ಹೊಂದಿರುವುದು ಖಡ್ಡಾಯವಾಗಿದೆ.
ಜಿಲ್ಲೆಯ ಪ್ರತಿಭಾನ್ವಿತ ಆಟಗಾರರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಕರೆನೀಡಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಕಾರ್ಯದರ್ಶಿ ಐಚೆಟ್ಟಿರ ಪೊನ್ನಪ್ಪ (9900785141) ಅವರನ್ನು ಸಂಪರ್ಕಿಸಬಹುದಾಗಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: