ಮೈಸೂರು

ಸಾಲ ಮರುಪಾವತಿಸಲಾಗದ ಹಿನ್ನೆಲೆ ರೈತ ನೇಣಿಗೆ ಶರಣು

ಸಾಲದ ಹೊರೆ  ತಾಳಲಾರದೇ ಪ್ರಗತಿಪರ ರೈತನೋರ್ವ ನೇಣಿಗೆ ಶರಣಾದ ಘಟನೆ ಕೆ.ಆರ್.ಪೇಟೆಯಲ್ಲಿ ನಡೆದಿದೆ.

ಮೃತನನ್ನು ಕೆ.ಆರ್.ಪೇಟೆ ತಾಲೂಕಿನ ಕುಪ್ಪಹಳ್ಳಿ ಗ್ರಾಮದ ನಿವಾಸಿ ಬೋಜೇಗೌಡರ ಪುತ್ರ ಕೆ.ಬಿ.ಚಂದ್ರೇಗೌಡ(45) ಎಂದು ಗುರುತಿಸಲಾಗಿದೆ.  ಕೃಷಿ ಕೆಲಸಕ್ಕಾಗಿ ಬಂಡಿಹೊಳೆಯ ಕಾವೇರಿ ಗ್ರಾಮೀಣ ಬ್ಯಾಂಕ್ ಮತ್ತು ಪಟ್ಟಣದ ಕರ್ನಾಟಕ ಬ್ಯಾಂಕಿನಲ್ಲಿ ವಿಪರೀತ ಸಾಲಮಾಡಿದ್ದ ಎನ್ನಲಾಗಿದೆ. ಆದರೆ ಬರದ ಹಿನ್ನೆಲೆ, ಫಸಲು ಬರದ ಕಾರಣ ಸಾಲ ಮರುಪಾವತಿಸಲಾಗದೇ  ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ಪತ್ನಿ ರಾಣಿ ದೂರು ದಾಖಲಿಸಿದ್ದಾರೆ.

Leave a Reply

comments

Related Articles

error: