ಮೈಸೂರು

ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ  ಸಿ ಎಚ್ ವಿಜಯಶಂಕರ್ ಬಿಜೆಪಿ ಸೇರ್ಪಡೆಗೆ ಗೊಳ್ಳುವುದು ಖಚಿತ !

ಮೈಸೂರು,ಅ.25:- ಮಾಜಿ ಸಚಿವ, ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ  ಸಿ ಎಚ್ ವಿಜಯಶಂಕರ್ ಬಿಜೆಪಿ ಸೇರ್ಪಡೆಗೆ ಗೊಳ್ಳುವುದು ಖಚಿತವಾಗಿದೆ.

ದೀಪಾವಳಿ ಬಳಿಕ ವಿಜಯ್ ಶಂಕರ್ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭಿಸಿದೆ. ಕೈ ತೊರೆದು ಕಮಲ ಹಿಡಿಯಲು   ಸಿ ಎಚ್  ವಿಜಯಶಂಕರ್ ಸಜ್ಜಾಗಿದ್ದಾರೆ. ನಿನ್ನೆಯಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್  ಅವರನ್ನು ಗೌಪ್ಯವಾಗಿ ವಿಜಯಶಂಕರ್ ಭೇಟಿಯಾಗಿದ್ದಾರೆ.  ವಿಜಯಶಂಕರ್ ಬಿಜೆಪಿ ಸೇರ್ಪಡೆಗೆ ಯಾರ ವಿರೋಧವು ವ್ಯಕ್ತವಾಗದ ಹಿನ್ನಲೆಯಲ್ಲಿ ಸೇರ್ಪಡೆಗೆ ವಿಜಯಶಂಕರ್ ಸಜ್ಜಾಗುತ್ತಿದ್ದಾರೆ.  ಬೆಂಬಲಿಗರು ಮತ್ತು ಅಭಿಮಾನಿಗಳ ಜೊತೆ ಸಭೆ ನಡೆಸಿ ದಿನಾಂಕ್ ನಿಗದಿ ಮಾಡಲಿದ್ದಾರಂತೆ.   ಯಾವುದೇ ಷರತ್ತಿಲ್ಲದೇ ಬಿಜೆಪಿಗೆ ಹೋಗ್ತಿದ್ದಾರಂತೆ. ಬಿಜೆಪಿ ಮೈಸೂರು ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಕಂಡಿದ್ದು, ಹುಣಸೂರು ಬೈ ಎಲೆಕ್ಷನ್ ಸಂದರ್ಭದಲ್ಲಿ ಕಾಂಗ್ರೆಸ್ ಗೆ ಮರ್ಮಾಘಾತವಾಗಿದೆ. ಸಿ ಎಚ್ ವಿಜಶಂಕರ್  ಬಿಜೆಪಿ ಸೇರ್ಪಡೆಯಿಂದ ಹುಣಸೂರಿನಲ್ಲಿ ಬಿಜೆಪಿ ಗೆಲ್ಲುತ್ತಾ ಎಂದು  ಬಿಜೆಪಿ ನಾಯಕರು ಹಲವು ಲೆಕ್ಕಾಚಾರದಲ್ಲಿದ್ದಾರೆ. ಹುಣಸೂರು ಭಾಗದಲ್ಲಿ ಸಿ ಎಚ್ ವಿಜಯಶಂಕರ್ ತಮ್ಮದೇ ಆದ ವೈಯುಕ್ತಿಕ ವರ್ಚಸ್ಸು ಹೊಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: