ಪ್ರಮುಖ ಸುದ್ದಿಮೈಸೂರು

ರಘುಲೀಲಾ ದೀಪ ಧ್ವನಿ – ದೀಪದೊಂದಿಗೆ ಸಂಗೀತ ನಡಿಗೆ.28.

ಮೈಸೂರು, ಅ.25 : ನಗರದ ಸಂಸ್ಕೃತಿ ಪ್ರತಿಬಿಂಬಿಸುವ ನಿಟ್ಟಿನಲ್ಲಿ ಅ. 28 ರಂದು ನಗರದ ವಿಜಯನಗರದಲ್ಲಿ ರಘುಲೀಲಾ ದೀಪ ಧ್ವನಿ- ದೀಪದೊಂದಿಗೆ ಸಂಗೀತ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಾಗ್ಮಿ ಕೃಷ್ಣೇಗೌಡ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಸಂಜೆ 5ಕ್ಕೆ ಸಂಗೀತ ಶಾಲೆಯ ಸುಮಾರು 150 ವಿದ್ಯಾರ್ಥಿಗಳು ಬಡಾವಣೆಯ ಯೋಗಾ ನರಸಿಂಹಸ್ವಾಮಿ ದೇವಸ್ಥಾನದಿಂದ ಸುಶ್ರಾವ್ಯವಾಗಿ ರಾಗ ಹಾಡುತ್ತ ದೀಪಗಳೊಂದಿಗೆ ಸಾಗಲಿದ್ದಾರೆ.

ಇದು ಸುಮಾರು ಒಂದು ಕಿ.ಮೀ ನಡಿಗೆಯಾಗಿದ್ದು, ಪ್ರಮುಖ ರಸ್ತೆಗಳಲ್ಲಿ ಸಾಗಿ ಮತ್ತೆ ದೇವಸ್ಥಾನದ ಆವರಣಕ್ಕೇ ಬಂದು ತಲುಪುತ್ತದೆ. ಈ ಬಳಿಕ ತಮ್ಮಿಂದ ದೀಪ ನುಡಿ, ಖ್ಯಾತ ಅಂತಾರಾಷ್ಟ್ರೀಯ ಯೋಗ ಪಟು ಖುಷಿ ಅವರಿಂದ ಯೋಗ ಪ್ರದರ್ಶನ ನಡೆಯಲಿದೆ ಎಂದು ವಿವರಿಸಿದರು.

ಜಿಎಸ್‌ಎಸ್ ಪ್ರತಿಷ್ಠಾನದ ಶ್ರೀಹರಿ ಮಾತನಾಡಿ, ನಗರದ ಸಾಂಸ್ಕೃತಿಕ ಆರೋಗ್ಯ ವೃದ್ಧಿ ನಿಟ್ಟಿನಲ್ಲಿನ ವಿಶಿಷ್ಟ ಕಾರ್ಯಕ್ರಮ ಇದಾಗಿದ್ದು, ಇಂತಹ ಕಾರ್ಯಕ್ರಮಗಳು ಮೈಸೂರಿನಲ್ಲಿ ಮಾತ್ರ ನಡೆಯಲು ಸಾಧ್ಯ. ಇನ್ನು, ಇದೇ ರೀತಿಯ ಇತರೆ ಬಡಾವಣೆಗಳಿಂದಲೂ ದೀಪ ನಡಿಗೆ ಕಾರ್ಯಕ್ರಮ ಆಯೋಜಿಸಿ, ಅವುಗಳಲ್ಲಿ ಪಾಲ್ಗೊಂಡವರೆಲ್ಲರೂ ದೀಪ ನಡಿಗೆಯೊಂದಿಗೆ ಅರಮನೆ ತಲುಪುವಂತಹ ವಿಶಿಷ್ಟ ಕಾರ್ಯಕ್ರಮ ನಡೆಸುವ ಉದ್ದೇಶವೂ ತಮಗಿದೆ ಎಂದರು.

ಸಂಗೀತ ಶಾಲೆಯ ಸುನೀತಾ ಚಂದ್ರಶೇಖರ್, ಸಿ.ಕೆ. ಮಹೇಂದ್ರ, ಪಾಲಿಕೆ ಸದಸ್ಯ ಸುಬ್ಬಯ್ಯ ಹಾಜರಿದ್ದರು. (ವರದಿ : ಕೆ.ಎಂ.ಆರ್)

 

Leave a Reply

comments

Related Articles

error: