ಸುದ್ದಿ ಸಂಕ್ಷಿಪ್ತ

‘ಜಮ್ಮು ಕಾಶ್ಮೀರ’ 2019 ಮೊದಲು-ನಂತರ : ಉಪನ್ಯಾಸ ನಾಳೆ

ಮೈಸೂರು.ಅ.25 : ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ ಪ್ರಾಂತ ಮತ್ತು ಬಾಬಾ ಸಾಹೇಬ ಆಪಟೆ ಸ್ಮಾರಕ ಸಮಿತಿ ಟ್ರಸ್ಟ್ ಬೆಂಗಳೂರು ವತಿಯಿಂದ ‘ಜಮ್ಮು ಕಾಶ್ಮೀರ’ 5ನೇ ಆಗಸ್ಟ್ 2019ಕ್ಕೂ ಮೊದಲು ಮತ್ತು ನಂತರ ವಿಷಯವಾಗಿ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿದೆ.

ಅ.26ರ ಸಂಜೆ 5.30ಕ್ಕೆ ಮಾಧವ ಕೃಪದಲ್ಲಿ, ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರ ಸದಸ್ಯ ದಿಲೀಪ್ ಕಚ್ರೂ ಜಿ ಉಪನ್ಯಾಸ ಮಂಡಿಸಲಿದ್ದಾರೆ. ಸಂಘ ಚಾಲಕ್ ಮಾ.ವೆಂಕಟರಾಂ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರು ವಿಭಾಗದ ಪ್ರಮುಖ್ ಜಿ.ರಾಜೇಶ್ ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: