ಮೈಸೂರು

ಎಸ್ ಬಿಐ ಜೊತೆ ಸಹವರ್ತಿ ಬ್ಯಾಂಕ್ ಗಳ ವಿಲೀನಕ್ಕೆ ವಿರೋಧ : ಬ್ಯಾಂಕ್ ಸಿಬ್ಬಂದಿಗಳ ಪ್ರತಿಭಟನೆ

ಎಸ್ ಬಿಐ ಜೊತೆ ಸಹವರ್ತಿ ಬ್ಯಾಂಕ್ ಗಳ ವಿಲೀನಕ್ಕೆ ವಿರೋಧ, ನೋಟು ಅಮಾನ್ಯೀಕರಣದ ವೇಳೆ ಹೆಚ್ಚುವರಿ ಕೆಲಸಕ್ಕೆ ವಿಶೇಷ ಭತ್ಯೆ ನೀಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರ್ವಜನಿಕ ರಂಗದ  ಬ್ಯಾಂಕ್ ಗಳ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಬ್ಯಾಂಕಿಂಗ್ ಸೇವೆ ಸ್ತಬ್ಧವಾಗಿದ್ದು, ಮೈಸೂರಿನಲ್ಲಿಯೂ ಬ್ಯಾಂಕ್ ನೌಕರರು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸ್ಟೇಟ್ ಬ್ಯಾಂಕ್ ಸಮೂಹ, ಕಾರ್ಪೊರೇಷನ್ ಬ್ಯಾಂಕ್, ಕೆನರಾಬ್ಯಾಂಕ್, ಐಡಿಬಿಐ ಬ್ಯಾಂಕ್, ಎಸ್.ಬಿ.ಐ, ಎಸ್.ಬಿಎಂ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕರ್ನಾಟಕ ಬ್ಯಾಂಕ್ ಸೇರಿದಂತೆ ಎಲ್ಲ ರಾಷ್ಟ್ರೀಕೃತ ಬ್ಯಾಂಕ್ ಗಳು ಮುಷ್ಕರದಲ್ಲಿ ಪಾಲ್ಗೊಂಡಿವೆ.

ಮುಷ್ಕರದಲ್ಲಿ ನಿರತರಾದ ಸಿಬ್ಬಂದಿಗಳು  ಗ್ರಾಚ್ಯುಟಿ ಮೇಲಿನ ತೆರಿಗೆ ವಾಪಸ್ ಪಡೆಯಿರಿ, ಐಡಿಬಿಐ ಬ್ಯಾಂಕ್ ಗಳ ವೇತನವನ್ನು  ಪರಿಷ್ಕರಿಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜತೆ ಸಹವರ್ತಿ ಬ್ಯಾಂಕ್ ಗಳನ್ನು ವಿಲೀನಗೊಳಿಸದರಿ, ಹೊಸ ಕಾರ್ಮಿಕ ನೀತಿಯನ್ನು ಜಾರಿಗೊಳಿಸದಿರಿ, ನೋಟು ಅಮಾನ್ಯೀಕರಣದ ವೇಳೆ ಹೆಚ್ಚುವರಿ ಕೆಲಸಕ್ಕೆ ವಿಶೇಷ ಭತ್ಯೆಯನ್ನು ನೀಡಿ, ವಸೂಲಾಗದ ಸಾಲಕ್ಕೆ ಉನ್ನತ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ, ಹೊರಗುತ್ತಿಗೆ ಹೆಚ್ಚಳ ಮಾಡುವ ನಿರ್ಧಾರವನ್ನು ಕೈಬಿಡಿ ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು.

ಐಸಿಐಸಿಐ, ಎಚ್.ಡಿಎಫ್ ಸಿ, ಆ್ಯಕ್ಸಿಸ್, ಕೊಟಕ್ ಮಹೀಂದ್ರ ಸೇರಿದಂತೆ ಹೊಸ ಬ್ಯಾಂಕ್ ಗಳು ಎಂದಿನಂತೆ  ಕಾರ್ಯ ನಿರ್ವಹಿಸುತ್ತಿವೆ.

Leave a Reply

comments

Related Articles

error: