ಮೈಸೂರು

ಕುಕ್ಕರಹಳ್ಳಿ ಕೆರೆ ಏರಿಯ ಮೇಲೆ ಅಸ್ವಸ್ಥಗೊಂಡು ಬಿದ್ದಿದ್ದ ವಲಸೆ ಪಕ್ಷಿ ಸ್ಪಾಟ್‌-ಬಿಲ್ಡ ಪೆಲಿಕಾನ್‌ ರಕ್ಷಣೆ

ಮೈಸೂರು, ಅ.26:-  ನಿನ್ನೆ ಬೆಳಿಗ್ಗೆ ಕುಕ್ಕರಹಳ್ಳಿ ಕೆರೆ ಏರಿಯ ಮೇಲೆ   ಅಸ್ವಸ್ಥಗೊಂಡು ಬಿದ್ದಿದ್ದ ವಲಸೆ ಪಕ್ಷಿ ಸ್ಪಾಟ್‌-ಬಿಲ್ಡ ಪೆಲಿಕಾನ್‌  ನ್ನು ರಕ್ಷಿಸಲಾಗಿದ್ದು, ಬೋಗಾದಿ ಯಲ್ಲಿರುವ ಪೀಪಲ್‌ ಫಾರ್‌ ಅನಿಮಲ್‌ (ಪಿಎಫ್‌ಎ)ಪ್ರಾಣಿ ಸಂರಕ್ಷಣೆ ಕೇಂದ್ರದಲ್ಲಿ ಅದಕ್ಕೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಪಕ್ಷಿ ಅಸ್ವಸ್ಥಗೊಂಡು ಬಿದ್ದಿರುವ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪಿಎಫ್‌ಎ ಸ್ವಯಂಸೇವಕರು, ಚಿಕಿತ್ಸೆಗಾಗಿ ತಮ್ಮ ಕೇಂದ್ರಕ್ಕೆ ತೆಗೆದುಕೊಂಡು ಹೋಗಿದ್ದಾರೆ.  ಕಲುಷಿತ ನೀರಿನ ಸೇವನೆಯಿಂದ ಅಥವಾ ಸೋಂಕಿತ ಮೀನುಗಳನ್ನು ಸೇವಿಸಿರುವುದರಿಂದ ಪಕ್ಷಿ ವೈರಲ್‌ ಸೋಂಕಿನಿಂದ ಬಳಲುತ್ತಿದೆಯೇ ಅಥವಾ ಸಹಜ ಅನಾರೋಗ್ಯದಿಂದ ಬಳಲುತ್ತಿದೆಯೇ ಎಂದು ಪಿಎಫ್‌ಎ ಕೇಂದ್ರದ ಪಶುವೈದ್ಯಕೀಯ ತಜ್ಞರು ಪರಿಶೀಲಿಸುತ್ತಿದ್ದಾರೆ.

ನಿನ್ನೆ ಮುಂಜಾನೆ ವಾಯುವಿಹಾರಕ್ಕೆ ಬಂದವರಿಗೆ ಕೆರೆಯ ಉತ್ತರ ಭಾಗದಲ್ಲಿ ಹಕ್ಕಿ ಬಿದ್ದಿರುವುದು ಕಂಡುಬಂದಿತ್ತು.  ಕೂಡಲೇ ಅವರು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: