ದೇಶ

ಕೊಳವೆ ಬಾವಿಗೆ ಬಿದ್ದ ಮಗುವನ್ನು ರಕ್ಷಿಸಲು ಹರಸಾಹಸ ಪಡುತ್ತಿರುವ ರಕ್ಷಣಾ ಪಡೆ

ತಿರುಚಿರಪಳ್ಳಿ,ಅ.26-ಇಪ್ಪತ್ತೈದು ಅಡಿ ಬೋರ್ ವೆಲ್ ಒಳಗೆ ಬಿದ್ದಿರುವ ಎರಡು ವರ್ಷದ ಮಗುವಿನ ರಕ್ಷಣೆಗಾಗಿ ರಕ್ಷಣಾ ಪಡೆಗಳು ಹರಸಾಹಸ ಪಡುತ್ತಿವೆ.

ತಮಿಳುನಾಡಿನ ತಿರುಚಿರಪಳ್ಳಿಯ ನದುಕಟ್ಟುಪಟ್ಟಿಯಲ್ಲಿ ನಿನ್ನೆ ಎರಡು ವರ್ಷದ ಮಗು ಸುಜಿತ್ ವಿಲ್ಸನ್ ಕೊಳವೆ ಬಾವಿಗೆ ಬಿದ್ದಿದ್ದಾನೆ. ಸಂಜೆ 5.30ರ ವೇಳೆಗೆ ಮನೆಯ ಹತ್ತಿರ ಆಟವಾಡುತ್ತಿದ್ದಾಗ ಕೊಳವೆ ಬಾವಿಗೆ ಬಿದ್ದಿದ್ದಾನೆ.

ಸ್ಥಳದಲ್ಲಿ ರಕ್ಷಣಾ ಪಡೆಯವರು ಇದ್ದು, ಮಗುವನ್ನು ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ. 10 ಅಡಿ ಆಳದಲ್ಲಿ ಬಂಡೆ ಎದುರಾದ ಹಿನ್ನಲೆಯಲ್ಲಿ ರಕ್ಷಣಾ ಕಾರ್ಯ ಸ್ಥಗಿತಗೊಳಸಲಾಗಿದೆ. ಕೊಳವೆ ಬಾವಿಯೊಳಗೆ ಆಮ್ಲಜನಕದ ವ್ಯವಸ್ಥೆ ಮಾಡಲಾಗಿದೆ.

ವಿಶೇಷ ಉಪಕರಣ ಬಳಕೆ
ಭೂಮಿಯಾಳದಲ್ಲಿ ರಕ್ಷಣಾ ಕಾರ್ಯಗಳಿಗೆಂದೇ ಅಭಿವೃದ್ಧಿಪಡಿಸಲಾಗಿರುವ ವಿಶೇಷ ಸಾಧನ ಬಳಸಿ ಮಗುವಿನ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಉಪಕರಣವನ್ನು ಮಧುರೈನಿಂದ ತರಿಸಿಕೊಳ್ಳಲಾಗಿದೆ. ಇದರ ಜತೆಗೆ ಬುಲ್ಡೋಜರ್‌, ಇಟಾಚಿ ಮೊದಲಾದ ಉಪಕರಣಗಳನ್ನೂ ಬಳಿಸಿ ತ್ವರಿತವಾಗಿ ಮಗುವಿನ ರಕ್ಷಣಾ ಕಾರ್ಯ ಮಾಡಲಾಗುತ್ತಿದೆ. ಈ ವಿಶೇಷ ಉಪಕರಣದ ಬಳಕೆ ಹಲವು ಬಾರಿ ಯಶಸ್ವಿಯಾಗಿದೆ. ಇದನ್ನು ಎಂ. ಮಣಿಕಂದನ್‌ ಎಂಬುವವರು ಅಭಿವೃದ್ಧಿಪಡಿಸಿದ್ದು, ಅವರ ಮಾರ್ಗದರ್ಶನದಲ್ಲಿಯೇ ರಕ್ಷಣಾ ಕಾರ್ಯ ಮುಂದುವರಿದಿದೆ. (ಎಂ.ಎನ್)

Leave a Reply

comments

Related Articles

error: