ಕರ್ನಾಟಕ

ಪ್ರತಿಕೂಲ ಹವಾಮಾನ: ಲ್ಯಾಂಡ್ ಆಗದೇ 50 ನಿಮಿಷ ಆಕಾಶದಲ್ಲೇ ಹಾರಾಡಿದ ವಿಮಾನ

ಹುಬ್ಬಳ್ಳಿ,.26-ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಮಾನವೊಂದು ಲ್ಯಾಂಡ್ ಆಗದೇ 50 ನಿಮಿಷಗಳವರೆಗೆ ಆಕಾಶದಲ್ಲೇ ಹಾರಾಡಿದೆ. ಇದರಿಂದ ಪ್ರಯಾಣಿಕರು ಆತಂಕಕ್ಕೀಡಾಗಿದ್ದರು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸದೆ ವಿಮಾನ ಲ್ಯಾಂಡ್ ಆಗಿದೆ.

ಬೆಂಗಳೂರು ವಿಮಾನ ನಿಲ್ದಾಣದಿಂದ ಬೆಳಿಗ್ಗೆ 8.05ಕ್ಕೆ ಹೊರಟ ಇಂಡಿಗೋ ವಿಮಾನ 8.55ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಆದರೆಪ್ರತಿಕೂಲ ಹವಾಮಾನದಿಂದಾಗಿ ಲ್ಯಾಂಡಿಂಗ್ಗೆ ಸಿಗ್ನಲ್ದೊರೆಯಲೇ ಇಲ್ಲ. ಹೀಗಾಗಿ ಸುಮಾರು 50 ನಿಮಿಷಗಳವರೆಗೆ ಆಕಾಶದಲ್ಲೇ ಹಾರಾಡಿ ಬಳಿಕ 9.40ಕ್ಕೆ ವಿಮಾನ ಲ್ಯಾಂಡ್ ಆಗಿದೆ.

ವಿಮಾನ ಲ್ಯಾಂಡ್ ಆದ ಬಳಿಕ ಪ್ರಯಾಣಿಕರು ನಿಟ್ಟುಸಿರು ಬಿಟ್ಟು, ಪೈಲಟ್ಗೆ ಹಸ್ತಲಾಘವ ಮಾಡಿ ಖುಷಿ ಹಂಚಿಕೊಂಡರು.

ಲ್ಯಾಂಡಿಂಗ್ ಗೆ ಸಿಗ್ನಲ್ ದೊರೆಯದಿದ್ದಾಗ ಬೆಂಗಳೂರಿಗೆ ವಾಪಸ್ಹೋಗುವುದಾಗಿ ಪೈಲಟ್ತಿಳಿಸಿದ್ದರು. ಮತ್ತೊಮ್ಮೆ ಪ್ರಯತ್ನಿಸುವುದಾಗಿ ಹೇಳಿದ ಪೈಲಟ್ಮರಳಿ ಯತ್ನ ಮಾಡಿದರೂ ವಿಪರೀತ ಮೋಡಗಳು ಇದ್ದ ಕಾರಣ ಅವಕಾಶ ಸಿಗಲಿಲ್ಲ. ಇದರಿಂದ ನಿರಾಸೆಗೊಂಡ ಪೈಲಟ್ಮುಂಬೈಗೆ ಹೋಗುವುದಾಗಿ ಹೇಳಿದರು. ಆಗ ಪ್ರಯಾಣಿಕರು ಕೆಲ ಕಾಲ ಉದ್ವೇಗಕ್ಕೊಳಗಾದರು.

ಪ್ರಯಾಣಿಕರ ಸಂಕಟ ಒಂದೆಡೆಯಾದರೆ, ಪೈಲಟ್ಲ್ಯಾಂಡಿಂಗ್ಗೆ ಅವಕಾಶ ಸಿಗದೇ ಕಂಗಾಲಾದ ಸ್ಥಿತಿ ಎದುರಿಸುವಂತಾಗಿತ್ತು. ಕೊನೆ ಪ್ರಯತ್ನವಾಗಿ ಪೈಲಟ್ವಿಮಾನ ಲ್ಯಾಂಡಿಂಗ್ಗೆ ಯತ್ನಿಸಿ ಯಶಸ್ವಿಯಾದರು ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.

ಕುರಿತು ಹುಬ್ಬಳ್ಳಿ ಏರ್ಪೋರ್ಟ್ನಿರ್ದೇಶಕರ ಕಚೇರಿ ಸಂಪರ್ಕಿಸಿದಾಗ, ತೆರನಾದ ಘಟನೆ ನಮ್ಮ ಗಮನಕ್ಕೆ ಬಂದಿಲ್ಲ. ಯಾವುದೇ ಸಮಸ್ಯೆಯೂ ಆಗಿಲ್ಲ. ಬಹುಶಃ ಪೈಲಟ್ಗೆ ರನ್ವೇ ಲೈನ್ಸಿಗದೇ ಆತ್ಮವಿಶ್ವಾಸದ ಕೊರತೆ ಆಗಿರಬಹುದು. ಒಮ್ಮೊಮ್ಮೆ ರೀತಿ ಆಗಿರುತ್ತದೆ ಎಂದು ನಿರ್ದೇಶಕರ ಅನುಪಸ್ಥಿತಿಯಲ್ಲಿ ಸಿಬ್ಬಂದಿಯೊಬ್ಬರು ತಿಳಿಸಿದರು. (ಎಂ.ಎನ್)

 

Leave a Reply

comments

Related Articles

error: