ಮೈಸೂರು

ಮಹಾರಾಜ ಪದವಿ ಕಾಲೇಜಿನ ಕನ್ನಡ ವಿಭಾಗದಲ್ಲೇ ಕನ್ನಡದ ನಾಮಫಲಕ ಕಣ್ಮರೆ : ಕನ್ನಡಾಭಿಮಾನಿಗಳ ಆಕ್ರೋಶ

ಮೈಸೂರು,ಅ.26:-  ಮೈಸೂರು ವಿಶ್ವವಿದ್ಯಾಲಯದಕ್ಕೆ ಸೇರಿದ ಮಹಾರಾಜ ಪದವಿ ಕಾಲೇಜಿನ ಕನ್ನಡ  ವಿಭಾಗದಲ್ಲೇ ಕನ್ನಡದ ನಾಮಫಲಕ ಕಣ್ಮರೆಯಾಗಿರುವುದು ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡ ಭಾಷೆಗೆ ಪ್ರಥಮ ಜ್ಞಾನಪೀಠ ಪ್ರಶಸ್ತಿ ಯನ್ನು ತಂದು ಕೊಟ್ಟ ಕುವೆಂಪು  ಆದಿಯಾಗಿ ಅನೇಕ ಖ್ಯಾತನಾಮರು ವಿದ್ಯಾಭ್ಯಾಸಕ ಕಲಿತ ಕಾಲೇಜಿನಲ್ಲೇ ಕನ್ನಡ ಕಣ್ಮರೆಯಾಗಿರುವುದು ಕನ್ನಡ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಈ ಕುರಿತು ಕನ್ನಟ ಹೋರಾಟಗಾರ ರೂಪೇಶ್ ರಾಜಣ್ಣ ಎಂಬವರು ಟ್ವೀಟರ್ ನಲ್ಲಿ ಪೋಟೊ ಸಮೇತ ಟ್ವೀಟ್ ಮಾಡಿದ್ದು, ನೂರಾರು ಮಂದಿ ಕಾಲೇಜಿನ ನಡೆಗೆ ಕಿಡಿಕಾರಿದ್ದಾರೆ.  ಕನ್ನಡ ರಾಜ್ಯೋತ್ಸವದ ದಿನ ಸಮೀಪ ಇರುವಾಗಲೇ  ಖ್ಯಾತಿ ಪಡೆದಿರುವ ಕಾಲೇಜಿನ ಕನ್ನಡ ವಿಭಾಗದಲ್ಲೇ ಈ ಸ್ಥಿತಿಯಾದರೇ ಉಳಿದೆಡೆಯ ಕಥೆ ಏನು ಎಂಬುದೇ ಕನ್ನಡಾಭಿಮಾನಿಗಳ ಪ್ರಶ್ನೆಯಾಗಿದೆ.

ಕೆಲ ಕನ್ನಡಾಭಿಮಾನಿಗಳು ಕಾಲೇಜಿನ ನಡೆ ಖಂಡಿಸಿ ಪ್ರತಿಭಟನೆ ಮಾಡುವಂತೆಯೂ ಪ್ರತಿಕ್ರಿಯೆ ನೀಡಿದ್ದು, ಅಪಮಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಕನ್ನಡಾಭಿಮಾನಿಗಳು ಒತ್ತಾಯಿಸಿದ್ದಾರೆ.

ಇದೇ ವೇಳೆ ಗಂಗೋತ್ರಿ ಆವರಣದಲ್ಲಿರುವ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿಯೂ ಸಹ ಈ ಹಿಂದೆ ಇದ್ದ ಕನ್ನಡ ನಾಮಫಲಕವನ್ನು ಬದಲಿಸಿ ಹಿಂದಿನ ನಾಮಫಲಕ ಅಳವಡಿಸಲಾಗಿದೆ. ಮಾತ್ರವಲ್ಲದೆ, ಒಳಗೆ ಹಿಂದಿ ಟೈಮ್ ಟೇಬಲ್ ಬರಹಗಳ ಮೂಲಕ ಸದ್ದಿಲ್ಲದೆ ಹಿಂದಿ ಹೇರಿಕೆ ಮಾಡುತ್ತಿರುವ ಬಗ್ಗೆಯೂ ಚಿತ್ರ ಸಮೇತ ಟೀಕೆಗಳು ವ್ಯಕ್ತವಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: