ಕ್ರೀಡೆಪ್ರಮುಖ ಸುದ್ದಿ

ಅಪ್ಪನೊಂದಿಗೆ ಸೇರಿ ಗಾಡಿ ಕ್ಲೀನ್ ಮಾಡಿದ ಧೋನಿ ಪುತ್ರಿ ಜೀವಾ : ವೀಡಿಯೋ ವೈರಲ್

ದೇಶ(ನವದೆಹಲಿ)ಅ.26:-  ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ವಿಶ್ವ ನಂಬರ್ ಒನ್ ಮ್ಯಾಚ್ ಫಿನಿಶರ್ ಮಹೇಂದ್ರ ಸಿಂಗ್ ಧೋನಿ ಅವರು ಕ್ರಿಕೆಟ್ ನ್ನು ಪ್ರೀತಿಸುವಷ್ಟೇ ತಮ್ಮ ಬೈಕು ಮತ್ತು ಇತರ ವಾಹನಗಳನ್ನು ಇಷ್ಟಪಡುವಷ್ಟು   ಪ್ರೀತಿಸುತ್ತಾರೆ. ಅವರು ಅನೇಕ ಬೈಕುಗಳು ಮತ್ತು ಕಾರುಗಳನ್ನು ಹೊಂದಿದ್ದು,  ಇದೀಗ ಹೊಸ ವಾಹನವೊಂದು ಸೇರ್ಪಡೆಯಾಗಿದೆ.  ಈ ವಾಹನ ಹಸಿರು ಬಣ್ಣದ ನಿಸ್ಸಾನ್ ಜೋಂಗಾ ಆಗಿದೆ.

ನಿಸ್ಸಾನ್ 1 ಟನ್ ದೇಶದ ಮಿಲಿಟರಿಗಾಗಿ ವಿನ್ಯಾಸಗೊಳಿಸಲಾದ ವಾಹನವಾಗಿದೆ. ಈ ವಾಹನವನ್ನು ಮಿಲಿಟರಿ ಮಾತ್ರ ಬಳಸುತ್ತದೆ. ಇದು ಮಿಲಿಟರಿ ವಾಹನವಾಗಿದೆ. ಈ ವಾಹನವನ್ನು ಸಾಮಾನ್ಯ ರಸ್ತೆಗಳಲ್ಲಿ ನೋಡಲು ಸಾಧ್ಯವಿಲ್ಲ. ಏಕೆಂದರೆ ಇದನ್ನು ಭಾರತೀಯ ಸೈನ್ಯಕ್ಕಾಗಿ  ಮಾತ್ರ  ವಿನ್ಯಾಸಗೊಳಿಸಲಾಗಿದೆ. ಇದಕ್ಕೆ ಸೇನೆಯು ಜೋಂಗಾ ಎಂಬ ಹೆಸರನ್ನು ನೀಡಿತು. 1999 ರ ನಂತರ ಇದರ ನಿರ್ಮಾಣ ಸ್ಥಗಿತಗೊಂಡಿತು.   ಧೋನಿ ಈ ಗಾಡಿಯನ್ನು ಪಂಜಾಬ್ ನಲ್ಲಿ ಖರೀದಿಸಿದ್ದಾರೆ. ಈ ತಿಂಗಳು ರಾಂಚಿ ತಲುಪಿತ್ತು.

ಮಹೇಂದ್ರ ಸಿಂಗ್ ಧೋನಿ ಗುರುವಾರ ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ, ಅವರು ತನ್ನ ಮಗಳು ಜೀವಾ ಜೊತೆ ಕಾರನ್ನು ಕ್ಲೀನ್ ಮಾಡುತ್ತಿರುವುದು ಕಂಡು ಬಂದಿದೆ. ಈ ವೀಡಿಯೊದೊಂದಿಗೆ  ಅವರು ‘ಕಾರು ತುಂಬಾ ದೊಡ್ಡದಾಗಿದೆ. ಸಣ್ಣ ಸಹಾಯವೂ ಕೂಡ  ಬಹಳ ಸಾಕಷ್ಟು  ಸಹಾಯಕವಾಗಲಿದೆ’ ಎಂದು ಬರೆದುಕೊಂಡಿದ್ದು,  ಧೋನಿ ಮತ್ತು ಜೀವಾ   ಕಾರನ್ನು ಸ್ವಚ್ಛಗೊಳಿಸುತ್ತಿರುವ  ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ  ವೇಗವಾಗಿ ವೈರಲ್ ಆಗುತ್ತಿದೆ. (ಎಸ್.ಎಚ್)

Leave a Reply

comments

Related Articles

error: