ಮೈಸೂರು

ನಾಯಕರ ಪಡೆ ವತಿಯಿಂದ ಪಾಳೆಯಗಾರ ಕುಮಾರನಾಯಕ ಅವರ ಕಾಲದ ವೀರಗಲ್ಲುಗಳ ಸ್ಮರಣೆ

ಮೈಸೂರು,ಅ.26:- ಮೈಸೂರು ತಾಲೂಕಿನ ಕುಮಾರಬೀಡು ಗ್ರಾಮದಲ್ಲಿ ಇಂದು ನಾಯಕರ ಪಡೆ ವತಿಯಿಂದ ಪಾಳೆಯಗಾರ ಕುಮಾರನಾಯಕ ಅವರ ಕಾಲದ ವೀರಗಲ್ಲುಗಳ ಸ್ಮರಣೆ ಮಾಡಲಾಯಿತು.

ಮೈಸೂರು ನಾಯಕರ ಪಡೆ ವತಿಯಿಂದ ಪಾಳೆಯಗಾರರ ನೆನಪಿನ ವೀರಗಲ್ಲುಗಳಿಗೆ ನಮನ ಸಲ್ಲಿಸಲಾಯಿತು. ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ಹಲವಾರು ಪಾಳೆಪಟ್ಟು ಇದ್ದು  ಮೈಸೂರು ಸಂಸ್ಥಾನದ ಅಧೀನದಲ್ಲಿ ಹಲವಾರು ನಾಯಕ ಜನಾಂಗದ ಪಾಳೆಪಟ್ಟು ಇರುವುದನ್ನು ಶಿಲಾಶಾಸನಗಳ ದಾಖಲೆಗಳಲ್ಲಿ ಕಾಣಬಹುದಾಗಿದೆ.

ಅವರ ಐತಿಹಾಸಿಕ ಹಿನ್ನೆಲೆಯ ಸ್ಮರಣಾರ್ಥ ವೀರಗಲ್ಲುಗಳಿಗೆ ನಮನ ಸಲ್ಲಿಸಿದರು. ಅಧ್ಯಕ್ಷ ಪಡುವಾರಹಳ್ಳಿ ಎಂ ರಾಮಕೃಷ್ಣ, ಕೆ.ಜೆ. ಶ್ರೀಧರನಾಯಕ,ಸಾಹಿತಿ ಹರದನಹಳ್ಳಿ ನಂಜುಂಡಸ್ವಾಮಿ, ಹಿನಕಲ್ ವೆಂಕಟೇಶ,ಚಂದ್ರು,ಕುಮಾರಬೀಡು ಶಂಕರ್,ಶಿವಣ್ಣನಾಯಕ, ಮೋಹನ್,ಕುಮಾರ್,ಸಿದ್ದ ನಾಯಕ ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: