ಮನರಂಜನೆ

ಹಿಂದಿ ವೆಬ್ ಸರಣಿ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ತಾನ್ಯಾ ಹೋಪ್

ಬೆಂಗಳೂರು,ಅ.26- ಕನ್ನಡ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಇರುವ ನಟಿ ತಾನ್ಯಾ ಹೋಪ್ ಈಗ ಹೊಸ ಪ್ರಯೋಗಕ್ಕೆ ಕೈ ಹಾಕುತ್ತಿದ್ದಾರೆ.

ತಾನ್ಯಾ ಹೋಪ್ ಈಗ ವೆಬ್ ಸರಣಿ ಲೋಕಕ್ಕೆ ಕಾಲಿಡುತ್ತಿದ್ದಾರೆ ಎನ್ನಲಾಗುತ್ತಿದೆ. ತಾನ್ಯಾ ಈಗ ವೆಬ್ ಸರಣಿಗೆ ಎಂಟ್ರಿ ಕೊಡುವ ಮೂಲಕ ತನ್ನ ವ್ಯಾಪ್ತಿಯನ್ನು ಹಿಂದಿಯಲ್ಲೂ ವಿಸ್ತರಿಸಿಕೊಳ್ಳುತ್ತಿದ್ದಾರೆ.

ತಾನ್ಯಾ ಹೊಸ ಸರ್ನಿ ವೆಬ್ ಸಿರೀಸ್ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಆಗಿಲ್ಲ. ನೆಟ್ ಫ್ಲಿಕ್ಸ್ ನಿರ್ಮಿಸುವ ಸರಣಿಯಲ್ಲಿ ಕನ್ನಡದ ನಟಿ ತಾನ್ಯಾ ಮಿಂಚಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಮೂಲಗಳ ಪ್ರಕಾರ ತಾನ್ಯಾ ಡಿಸೆಂಬರ್ ನಿಂದ ವೆಬ್ ಸರಣಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರಂತೆ.

ತಾನ್ಯಾ ಹಿಂದಿ ಚಿತ್ರದಲ್ಲಿ ಮಿಂಚುವ ಕನಸು ಹೊಂದಿದ್ದಾರೆ. ಒಂದು ವೇಳೆ ಹಿಂದಿ ವೆಬ್ ಸರಣಿ ಸಕ್ಸಸ್ ಆದರೆ ಬಾಲಿವುಡ್ ಗೆ ಎಂಟ್ರಿ ಮತ್ತಷ್ಟು ಹತ್ತಿರವಾಗಲಿದೆ.

ಸದ್ಯ ಚಿರಂಜೀವಿ ಸರ್ಜಾ ಅಭಿನಯದ ‘ಖಾಕಿ’ ಸಿನಿಮಾದಲ್ಲಿ ತಾನ್ಯಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಟಾಲಿವುಡ್ ನ ಡಿಸ್ಕೋ ರಾಜಾ, ಕಾಲಿವುಡ್ ನ ಧಾರಾಳ ಪ್ರಭು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. (ಎಂ.ಎನ್)

 

Leave a Reply

comments

Related Articles

error: