
ಪ್ರಮುಖ ಸುದ್ದಿ
ದೆಹಲಿಯಲ್ಲಿ ಎರಡಲ್ಲ, ಒಂದೇ ಸರ್ಕಾರಿ ಬಂಗಲೆ ಇಟ್ಟುಕೊಳ್ಳುತ್ತಾರೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ
ದೇಶ(ನವದೆಹಲಿ)ಅ.26:- ಕೇಂದ್ರ ಸರ್ಕಾರವು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಲುಟಿಯೆನ್ಸ್ ದೆಹಲಿಯಲ್ಲಿ ಒಂದೇ ಸರ್ಕಾರಿ ಬಂಗಲೆ ಇಟ್ಟುಕೊಳ್ಳಲು ಅನುಮತಿ ನೀಡಿದ್ದು, ಎರಡನೇ ಬಂಗಲೆ ಖಾಲಿ ಮಾಡುವಂತೆ ಕೇಳಿಕೊಂಡಿದೆ.
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಮಾಜಿ ಪ್ರಧಾನಿ ದೇವೇಗೌಡರಿಗೆ ಒಂದೇ ಸರ್ಕಾರಿ ಬಂಗಲೆಯ ಹಕ್ಕುದಾರನೆಂದು ಉಲ್ಲೇಖಿಸಿದೆ, 16 ನೇ ಲೋಕಸಭೆಯಲ್ಲಿ ದೇವೇಗೌಡರಿಗೆ ಹಿರಿಯ ಸಂಸದರಾಗಿ ಸರ್ಕಾರಿ ಬಂಗಲೆ ನೀಡಲಾಗಿತ್ತು ಎಂಬುದು ಗಮನಾರ್ಹ. ಆದರೆ, ಮಾಜಿ ಸಂಸದರಿಂದ ಸರ್ಕಾರಿ ಬಂಗಲೆ ಖಾಲಿ ಮಾಡುವ ಪ್ರಕ್ರಿಯೆಯ ಭಾಗವಾಗಿ, ಕಳೆದ ಸೆಪ್ಟೆಂಬರ್ನಲ್ಲಿ 17 ನೇ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ದೇವೇಗೌಡರಿಗೆ ಸಚಿವಾಲಯದ ನಿರ್ದೇಶನಾಲಯವು ಬಂಗಲೆ ಖಾಲಿ ಮಾಡುವಂತೆ ನೋಟೀಸ್ ನೀಡಿತ್ತು.
ಮೂಲಗಳ ಪ್ರಕಾರ, ಈ ನೋಟಿಸ್ಗೆ ಪ್ರತಿಕ್ರಿಯೆಯಾಗಿ, ಮಾಜಿ ಪ್ರಧಾನ ಮಂತ್ರಿಯಾಗಿ ದೇವೇಗೌಡ ಅವರು ಲುಟಿಯೆನ್ಸ್ ದೆಹಲಿಯಲ್ಲಿ ಸರ್ಕಾರಿ ವಸತಿ ಸೌಕರ್ಯಗಳಿಗೆ ಅರ್ಹರಾಗಿದ್ದು, ಸಫ್ದಾರ್ ಜಂಗ್ ಲೇನ್ನಲ್ಲಿರುವ ಬಂಗಲೆಯಯನ್ನು ಹಾಗೇ ಉಳಿಸಿಕೊಡುವಂತೆ ಮನವಿ ಮಾಡಿದ್ದರು. ನಿರ್ದೇಶನಾಲಯವು ಅವರ ಮನವಿಯನ್ನು ಅಂಗೀಕರಿಸಿತ್ತು, ಆದರೆ ಪ್ರಧಾನ ಮಂತ್ರಿಯ ಅಧಿಕಾರಾವಧಿಯಲ್ಲಿ, ವಿ.ಪಿ ಹೌಸ್ ಅಧಿಕೃತ ಬಳಕೆಗಾಗಿ ಮಂಜೂರು ಮಾಡಿದ ಮನೆಯನ್ನು ಖಾಲಿ ಮಾಡುವಂತೆ ಕೇಳಿಕೊಳ್ಳಲಾಗಿದೆ.
ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು, ನಿಯಮಗಳ ಪ್ರಕಾರ, ಮಾಜಿ ಪ್ರಧಾನಿಗೆ ಕೇವಲ ಒಂದು ಸರ್ಕಾರಿ ನಿವಾಸಕ್ಕೆ (ಟೈಪ್ 7) ಅರ್ಹತೆ ಇದೆ ಎಂದು ಹೇಳಿದ್ದರು. ಆದ್ದರಿಂದ ದೇವೇಗೌಡರಿಗೆ ಎರಡನೇ ನಿವಾಸವನ್ನು ಖಾಲಿ ಮಾಡುವಂತೆ ಕೇಳಿಕೊಳ್ಳಲಾಗಿದೆ. ದೇವೇಗೌಡರು ನಿರ್ದೇಶನಾಲಯದ ಈ ಮನವಿಯನ್ನು ಅಂಗೀಕರಿಸಿದ್ದಾರೆಂದು ತಿಳಿದುಬಂದಿದೆ. ಶೀಘ್ರದಲ್ಲೇ ವಿ.ಪಿ.ಹೌಸ್ನಲ್ಲಿ ಮನೆಯನ್ನು ಖಾಲಿ ಮಾಡುವುದಾಗಿ ಲಿಖಿತ ಭರವಸೆ ನೀಡಿದ್ದಾರೆನ್ನಲಾಗಿದೆ.
ಮಾಹಿತಿಯ ಪ್ರಕಾರ, ಅಕ್ಟೋಬರ್ 24 ರವರೆಗೆ ಸರ್ಕಾರಿ ಬಂಗಲೆ ತೊರೆಯದ ಮಾಜಿ ಸಂಸದರ ಸಂಖ್ಯೆ ಸುಮಾರು 25 ರಷ್ಟಿತ್ತು. ಇವರಲ್ಲಿ ಮಾಜಿ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರನ್ನು ಬಿ.ಆರ್. ಮೆಹ್ತಾ ಲೇನ್ನಲ್ಲಿರುವ ಬಾಂಗ್ಲಾ ಪೊಲೀಸರ ಸಹಾಯದಿಂದ ಗುರುವಾರ ಸ್ಥಳಾಂತರಿಸಲಾಗಿದೆ.
ಇದಲ್ಲದೆ, ಪಪ್ಪು ಯಾದವ್ ಅವರ ಪತ್ನಿ ಮತ್ತು ಮಾಜಿ ಸಂಸದೆ ರಂಜಿತ್ ರಂಜನ್ ಮತ್ತು ಮಾಜಿ ಕೇಂದ್ರ ಸಚಿವ ಶಿಬು ಸೊರೆನ್ ಅವರು ಶೀಘ್ರದಲ್ಲೇ ಬಂಗಲೆ ತೊರೆಯುವುದಾಗಿ ನಿರ್ದೇಶನಾಲಯಕ್ಕೆ ಲಿಖಿತ ಭರವಸೆ ನೀಡಿದ್ದಾರೆ. ಸೊರೆನ್ಗೆ ನಾರ್ತ್ ಅವೆನ್ಯೂದಲ್ಲಿ 224 ಮತ್ತು 225 ಸಂಖ್ಯೆಯ ಎರಡು ಬಂಗಲೆಗಳು ಮತ್ತು ಬಿ.ಆರ್. ಮೆಹ್ತಾ ಲೇನ್ನಲ್ಲಿ ರಂಜನ್ಗೆ ಏಳನೇ ಬಂಗಲೆ ನೀಡಲಾಗಿದೆ.
ಈ ಸಂಸದರು ಇನ್ನೂ ಬಂಗಲೆ ತೊರೆದಿಲ್ಲ
ಮೂಲಗಳ ಪ್ರಕಾರ, ನೋಟಿಸ್ ಹೊರತಾಗಿಯೂ, ಬಂಗಲೆ ತೊರೆಯದವರಲ್ಲಿ ಮಾಜಿ ಸಂಸದ ತಾರಿಕ್ ಅನ್ವರ್, ಜೈ ಪ್ರಕಾಶ್ ನಾರಾಯಣ್ ಯಾದವ್, ಗಾಯಕ್ವಾಡ್ ರವೀಂದ್ರ ವಿಶ್ವನಾಥ್ ಮತ್ತು ಧರ್ಮೇಂದ್ರ ಯಾದವ್ ಸೇರಿದಂತೆ ಸುಮಾರು ಎರಡು ಡಜನ್ ಮಾಜಿ ಸಂಸದರು ಸೇರಿದ್ದಾರೆ. ಅವರಿಂದ ಬಂಗಲೆ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ನಿರ್ದೇಶನಾಲಯ ಪ್ರಾರಂಭಿಸಿದೆ. ದೀಪಾವಳಿಯ ಕಾರಣದಿಂದಾಗಿ ಸಾಕಷ್ಟು ಪೊಲೀಸ್ ಪಡೆಗಳ ಕೊರತೆಯಿಂದಾಗಿ ದೀಪಾವಳಿಯ ನಂತರ ಬಂಗಲೆಯನ್ನು ಬಲವಂತವಾಗಿ ಖಾಲಿ ಮಾಡುವ ಕ್ರಮ ತ್ವರಿತಗೊಳಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
17 ನೇ ಲೋಕಸಭೆಯಲ್ಲಿ ಚುನಾಯಿತರಾಗದ 230 ಸಂಸದರಿಂದ ಸರ್ಕಾರಿ ಮನೆಯನ್ನು ಖಾಲಿ ಮಾಡಿಸುವ ಸಲುವಾಗಿ ಜುಲೈನಲ್ಲಿ ಈ ಎಲ್ಲ ಮಾಜಿ ಸಂಸದರಿಗೆ ಬಂಗಲೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿತ್ತು. ಅರ್ಹತೆ ಕಳೆದುಕೊಂಡಿರುವ ಮಾಜಿ ಸಂಸದರು ಮತ್ತು ಸಂಸದರ ಅತಿಥಿಗಳಿಂದ ಮನೆಯನ್ನು ತೆರವುಗೊಳಿಸುವ ಪ್ರಕ್ರಿಯೆ ತೀವ್ರಗೊಂಡಿದೆ. (ಎಸ್.ಎಚ್)