ಪ್ರಮುಖ ಸುದ್ದಿಮೈಸೂರು

ಟಿಬೆಟನ್ ಹೊಸ ವರ್ಷಾಚರಣೆ ‘ಲೋಸರ್ ಉತ್ಸವ’ ಸಮಾರೋಪ ; ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರಗು

ಬೈಲಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಟಿಬೆಟನ್ ನಿರಾಶ್ರಿತರ ಶಿಬಿರದಲ್ಲಿ ಹೊಸ ವರ್ಷಾಚರಣೆ ಅಂಗವಾಗಿ ಮಂಗಳವಾರ ಟಿಬೆಟನ್ ಲುಗ್ಸಾಮ್ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಲೊಸರ್ ಉತ್ಸವದ ಸಮಾರೋಪ ಸಮಾರಂಭ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಇಂಡೋ-ಟಿಬೆಟನ್ ಫ್ರೇಂಡ್‌ಶಿಪ್ ಸಂಸ್ಥೆಯ ಅಧ್ಯಕ್ಷರಾದ ಹಿರಿಯ ವಕೀಲ ಬಿ.ವಿ. ಜವರೆಗೌಡ ಅವರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಟಿಬೆಟನ್ ವಿವಿಧ ಶಾಲೆಯ ಮಕ್ಕಳು ಟಿಬೆಟನ್ ಸಾಂಪ್ರದಾಯಿಕ ಉಡುಪು ಧರಿಸಿ, ನೃತ್ಯ, ಹಾಡು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಸಮಾರಂಭದಲ್ಲಿ ಟಿಬೆಟನ್ ಸಮಿತಿ ವತಿಯಿಂದ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಹಲವು ಕಿರು ನಾಟಕ ರೂಪಕಗಳನ್ನು ಪ್ರಸ್ತುತಪಡಿಸಲಾಯಿತು.

ಟಿಬೆಟನ್ ಕೇಂದ್ರೀಯ ಶಾಲೆಯ ವಿದ್ಯಾರ್ಥಿಗಳು, ಸಿಎಸ್‌ಟಿ, ಸಿವಿಪಿ, ಮತ್ತು ಎಸ್‌ಓಎಸ್ ಶಾಲೆಯ ಮಕ್ಕಳು ಹಾಗೂ ಹಲವು ವಿದ್ಯಾರ್ಥಿಗಳು ಹಾಜರಿದ್ದರು. ಮೊದಲನೆ ಕ್ಯಾಂಪ್‍ನ ನಿರಾಶ್ರಿತರು ನಡೆಸಿಕೊಟ್ಟ ನಗೆ ನಾಟಕ ನೆರೆದಿದ್ದ ಪ್ರೇಕ್ಷಕರಿಗೆ ಮುದ ನೀಡಿತ್ತು. ಉತ್ಸವದಲ್ಲಿ ಸಾವಿರಾರು ಟಿಬೆಟನ್ ನಿರಾಶ್ರಿತರು ಹಾಗೂ ಕಾರ್ಯಕ್ರಮದ ಅತಿಥಿಗಳು ಭಾಗವಹಿಸಿ ಸೂರ್ಯನಿಗೆ ಪುಷ್ಪ ಮತ್ತು ಧಾನ್ಯದ ಪುಡಿಯನ್ನು ಅರ್ಪಿಸುವ ಮೂಲಕ ಹಬ್ಬಕ್ಕೆ ಮೆರುಗು ನೀಡಿದರು.

Leave a Reply

comments

Related Articles

error: