ದೇಶಪ್ರಮುಖ ಸುದ್ದಿ

ಇಂದಿನಿಂದ ಪ್ರಧಾನಿ ಮೋದಿ ಸೌದಿ ಅರೇಬಿಯಾ ಪ್ರವಾಸ

ನವದೆಹಲಿ,ಅ.28- ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದಿನಿಂದ ಎರಡು ದಿನಗಳ ಕಾಲ ಸೌದಿ ಅರೇಬಿಯಾ ಪ್ರವಾಸ ಕೈಗೊಳ್ಳಲಿದ್ದಾರೆ.

ಸೌದಿ ಮಹಾರಾಜ ಸಲ್ಮಾನ್​ ಬಿನ್​ ಅಬ್ದುಲ್ಲಾಜಿಜ್ ಅಲ್ ಸೌದ್​ ಅವರ ಆಮಂತ್ರಣದ ಮೇರೆಗೆ ನರೇಂದ್ರ ಮೋದಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡುತ್ತಿದ್ದಾರೆ. ಅಲ್ಲಿನ ಯುವರಾಜ ಮೊಹಮ್ಮದ್​ ಬಿನ್​ ಸಲ್ಮಾನ್​ ಅವರ ಜತೆಯೂ ಮಾತುಕತೆ ನಡೆಸಲಿದ್ದಾರೆ.

ಭಾರತ ಹಾಗೂ ಸೌದಿ ಅರೇಬಿಯಾ ನಡುವೆ ಇಂಧನ ಹಾಗೂ ಆರ್ಥಿಕ ಕ್ಷೇತ್ರಗಳ ನಡುವಿನ ದ್ವಿಪಕ್ಷೀಯ ಒಪ್ಪಂದವನ್ನು ಬಲಪಡಿಸುವ ನಿಟ್ಟಿನಲ್ಲಿ ಮಾತುಕತೆ ನಡೆಯಲಿದೆ ಎನ್ನಲಾಗಿದೆ. ಇಂಧನಕ್ಕೆ ಸಂಬಂಧಪಟ್ಟಂತೆ ಸುಮಾರು 12 ಒಪ್ಪಂದಗಳಿಗೆ ಸಹಿಹಾಕುವ ಸಾಧ್ಯತೆ ಇದೆ. ಅಲ್ಲದೆ ರುಪೆ ಕಾರ್ಡ್​ ಕೂಡ ಉದ್ಘಾಟನೆ ಮಾಡಲಿದ್ದಾರೆ.

ಮಂಗಳವಾರ ರಿಯಾದ್ ನಗರದಲ್ಲಿ ನಡೆಯಲಿರುವ ಫ್ಯೂಚರ್​ ಇನ್ವೆಸ್ಟ್​ಮೆಂಟ್​ ಇನಿಶಿಯೇಟಿವ್​( ಭವಿಷ್ಯ ಹೂಡಿಕೆ ಆರಂಭ) ಗೆ ಸಂಬಂಧಪಟ್ಟ ಮೂರನೇ ಅಧಿವೇಶನದಲ್ಲಿ ಮೋದಿ ಪಾಲ್ಗೊಂಡು ಮಾತನಾಡಲಿದ್ದಾರೆ. ಅಂದು ರಾತ್ರಿ ನವದೆಹಲಿಗೆ ವಾಪಸ್​ ಆಗಲಿದ್ದಾರೆ. ಈ ಫ್ಯೂಚರ್​ ಇನ್ವೆಸ್ಟ್​ಮೆಂಟ್​ನ್ನು ರಿಯಾದ್​ನಲ್ಲಿ 2017ರಿಂದಲೂ ಆಯೋಜಿಸುತ್ತ ಬರಲಾಗುತ್ತಿದೆ.  (ಎಂ.ಎನ್)

Leave a Reply

comments

Related Articles

error: