ಕ್ರೀಡೆ

ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಬೆಳ್ಳಿಗೆ ತೃಪ್ತಿಪಟ್ಟುಕೊಂಡ ಸಾತ್ವಿಕ್-ಚಿರಾಗ್ ಜೋಡಿ

ಪ್ಯಾರಿಸ್,ಅ.28- ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸಾತ್ವಿಕ್ ಸಾಯ್ ರಾಜ್ ರಾಂಕಿರೆಡ್ಡಿಚಿರಾಗ್ ಶೆಟ್ಟಿ ಜೋಡಿ ಬೆಳ್ಳಿಯ ಪದಕ ಜಯಿಸಿದ್ದಾರೆ.

ನಿನ್ನೆ ನಡೆದ ಪುರುಷ ಡಬಲ್ಸ್ ನ ಫೈನಲ್ ಪಂದ್ಯದಲ್ಲಿ ಸಾತ್ವಿಕ್-ಚಿರಾಗ್ ಜೋಡಿ ಇಂಡೋನೇಷ್ಯಾ ಜೋಡಿ ಮರ್ಕ್ಯೂಸ್ ಫೆರ್ನಾಲ್ಡಿ ಗಿಡಿಯಾನ್ಕೆವಿನ್ ಸಂಜಯ ಸುಕಮುಲ್ಜೊ ವಿರುದ್ಧ ಪರಾಭವಗೊಂಡು ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಈ ಜೋಡಿ ತೀವ್ರ ಪ್ರತಿರೋಧ ನೀಡಿ 18-21, 16-21 ಅಂತರದಲ್ಲಿ ಸೋಲಿಗೆ ಶರಣಾಯಿತು. ಸೋಲಿನ ಹೊರತಾಗಿಯೂ ಟೂರ್ನಿಯಲ್ಲಿ ಫೈನಲ್ ತಲುಪಿದ ಮೊಟ್ಟಮೊದಲ ಭಾರತೀಯ ಜೋಡಿ ಎಂಬ ಹೆಗ್ಗಳಿಕೆಗೆ ಸಾತ್ವಿಕ್ಚಿರಾಗ್ ಪಾತ್ರರಾದರು.

ಆರಂಭದಲ್ಲೇ ಇಂಡೋನೇಷ್ಯಾ ತಂಡ 7-1 ಮುನ್ನಡೆ ಸಾಧಿಸಿತ್ತು. ಆದರೆ ಬಳಿಕ ಪ್ರತಿರೋಧ ತೋರಿದ ಭಾರತೀಯ ಜೋಡಿ ಜಾಣ್ಮೆಯ ಆಟದ ಮೂಲಕ 17-17 ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಆದರೆ ಅನುಭವಿ ಇಂಡೋನೇಷ್ಯಾ ಜೋಡಿ ಸತತವಾಗಿ ಮೂರು ಸೆಟ್ ಪಾಯಿಂಟ್ ಕಲೆ ಹಾಕಿ ಗೆಲುವು ಸಾಧಿಸಿದರು.

ಎರಡನೇ ಸೆಟ್ನಲ್ಲಿ ಆರಂಭದಿಂದಲೂ ಸಮಬಲದ ಹೋರಾಟ ಪ್ರದರ್ಶಿಸಿದ ಭಾರತೀಯ ಜೋಡಿ ಸ್ಕೋರ್ 12-12 ಸಾಧಿಸಿದರು. ಆದರೆ ಮತ್ತೆ ಇಂಡೋನೇಷ್ಯಾ ತಂಡ 18-13 ಮುನ್ನಡೆ ಸಾಧಿಸಿ ಭಾರತೀಯರ ಮೇಲೆ ಒತ್ತಡ ಹೇರಿತು. ಸತತ ನಾಲ್ಕು ಗೇಮ್ಪಾಯಿಂಟ್ ಮೂಲಕ ಇಂಡೋನೇಷ್ಯಾ ಜೋಡಿ ಏಳನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು. (ಎಂ.ಎನ್)

Leave a Reply

comments

Related Articles

error: