ಮೈಸೂರು

ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಆವರಣದಲ್ಲಿ ಅತ್ಯಾಧುನಿಕ ದಂತ ಚಿಕಿತ್ಸಾಲಯ ಉದ್ಘಾಟನೆ

ಮೈಸೂರು,ಅ.28:- ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಆವರಣದಲ್ಲಿ ಆರಂಭಿಸಲಾದ ಅತ್ಯಾಧುನಿಕ ದಂತ ಚಿಕಿತ್ಸಾಲಯವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಉನ್ನತ ತಂತ್ರಜ್ಞಾನದ ಸಲಕರಣೆಗಳೊಂದಿಗೆ ಸಮಕಾಲೀನ ತಂತ್ರಜ್ಞಾನ ಮತ್ತು ಸಾಧನಗಳನ್ನು ಅಳವಡಿಸಿಕೊಳ್ಳುವ ಮೂಲಕ ಆಸ್ಪತ್ರೆಯ ಗುಣಮಟ್ಟದ ಚಿಕಿತ್ಸೆ ಒದಗಿಸಲು ಮತ್ತು ದಂತ ಸೇವೆಗಳನ್ನು ಸಮಾಜದ ಎಲ್ಲಾ ವರ್ಗದವರಿಗೆ ಸುಲಭವಾಗಿ ಕೈಗೆಟುಕುವಂತೆ ಮಾಡಲು ಬದ್ಧವಾಗಿದೆ ಎಂದು ಮತ್ತೆ ಸಾಬೀತು ಪಡಿಸಿದೆ ಎಂದರು.

ಕೊಲಂಬಿಯಾ ಏಷಿಯಾ ಆಸ್ಪತ್ರೆಯ ದಂತ ಚಿಕಿತ್ಸಾ ಸಲಹೆಗಾರ ಡಾ.ಜಯಕುಮಾರ್ ಮಾತನಾಡಿ ಹೊಸ ಸೌಲಭ್ಯವು ನಮ್ಮ ರೋಗಿಗಳಿಗೆ ಉತ್ತಮ ಗುಣಮಟ್ಟದ ದಂತ ಚಿಕಿತ್ಸೆಯನ್ನು ಒದಗಿಸಲು ಸಹಾಯ ಮಾಡುತ್ತದೆ. ನಮ್ಮ ತಂತ್ರಜ್ಞಾನ ಆಧರಿಸಿ ಚಿಕಿತ್ಸೆ ಉತ್ತಮ ಗ್ರಾಹಕ ಸೇವೆಯನ್ನು ಒದಗಿಸಲು ಮತ್ತು ಒಟ್ಟಾರೆ ಹಲ್ಲಿನ ಆರೋಗ್ಯ ಮತ್ತು ಹಲ್ಲಿನ ನೈರ್ಮಲ್ಯದ ಬಗ್ಗೆ ರೋಗಿಗಳಿಗೆ ತಿಳಿಸಲು ಅನುವು ಮಾಡಿಕೊಡುತ್ತದೆ. ದಂತ ಚಿಕಿತ್ಸೆಯನ್ನು ರೋಗಿಗೆ ಸಾಧ್ಯವಾದಷ್ಟು ಆರಾಮದಾಯಕ ಬಾಳಿಕೆ ಬರುವ ಮತ್ತು ಪರಿಣಾಮಕಾರಿ ಮತ್ತು ನೈಸರ್ಗಿಕವಾಗಿ ಕಾಣುವಂತೆ ಮಾಡಲು ದಂತವೈದ್ಯಶಾಸ್ತ್ರ ಕ್ಷೇತ್ರವು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ ಎಂದರು.

ದಂತ ಚಿಕಿತ್ಸಾ ಘಟಕವು ಕಾಸ್ಮೆಟಿಕ್ಸ್ ಡೆಂಟಲ್ ಚಿಕಿತ್ಸೆ, ಸ್ಮೈಲ್ ಡಿಸೈನಿಂಗ್, ಪೂರ್ಣಬಾಯಿ ಚಿಕಿತ್ಸೆ, ಇಂಪ್ಲಾಂಟ್ಸ್ ಫಿಕ್ಸೆಷನ್ ಮತ್ತು ನಿರ್ವಹಣೆಯ ಜೊತೆಗೆ ಸ್ಕೇಲಿಂಗ್, ಕೀಳುವಿಕೆ, ಸಣ್ಣ ಶಸ್ತ್ರಚಿಕಿತ್ಸಾ ವಿಧಾನ ಮತ್ತು ರೂಟ್ ಕ್ಯಾನಲ್ ನಂತಹ ಹಲ್ಲಿನ ಇತರೆ ಸಾಮಾನ್ಯ ಸೇವೆಗಳನ್ನು ಒದಗಿಸಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: